





ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ-ಉಮೇಶ್ ಕೋಡಿಬೈಲ್



ಪುತ್ತೂರು: ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಜೂ.23ರಂದು ಮುಂಡೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಜನವಿರೋಧಿ ಸರಕಾರವಾಗಿದ್ದು ಭ್ರಷ್ಟಾಚಾರದಲ್ಲಿ ಮುಳುಗಿದೆ, 9/11ನಿಂದ ವಾಲ್ಮೀಕಿ ಹಗರಣದ ವರೆಗೆ ಎಲ್ಲ ಇಲಾಖೆಗಳಲ್ಲೂ ಹಗರಣ ಮಾಡಿರುವ ಸರಕಾರವೆಂದರೆ ಅದು ಈಗಿನ ಕಾಂಗ್ರೆಸ್ ಸರಕಾರವಾಗಿದ್ದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗಿ ಇತರ ಅಭಿವೃದ್ಧಿ ಕಾರ್ಯಗಳನ್ನು ಕಡಿತಗೊಳಿಸಿದೆ, ಈ ಸರಕಾರದ ವೈಫಲ್ಯದ ಬಗ್ಗೆ ಜನರು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ ಹಾಗೂ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿದರು.






ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಯಶೋಧ, ನರಿಮೊಗರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಮುಂಡೂರು ಗ್ರಾ.ಪಂ ಸದಸ್ಯರೂ ಆದ ಅಶೋಕ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯರಾದ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ್ಕ, ಬಾಲಕೃಷ್ಣ ಕುರೆಮಜಲು, ಉಮೇಶ್ ಗೌಡ ಅಂಬಟ, ಬಿಜೆಪಿ ಮುಂಡೂರು ಶಕ್ತಿಕೇಂದ್ರದ ಸಂಚಾಲಕ ಅನಿಲ್ ಕಣ್ಣರ್ನೂಜಿ, ಗೌತಮ್ ರೈ ಸರ್ವೆ, ಆಶೋಕ್ ರೈ ಸೊರಕೆ, ಹೇಮರಾಜ್ ರೆಂಜಲಾಡಿ, ಸುಂದರ ನಾಯ್ಕ, ಜಯಂತ ಭಕ್ತಕೋಡಿ, ಜಯಪ್ರಕಾಶ್, ಸುಂದರ ಬಲ್ಯಾಯ, ಶಂಕರ ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಮುಂಡೂರು ಶಕ್ತಿಕೇಂದ್ರದ ಸಂಚಾಲಕ ಅನಿಲ್ ಕಣ್ಣರ್ನೂಜಿ ಸ್ವಾಗತಿಸಿದರು. ಅಶೋಕ್ ರೈ ಸೊರಕೆ ವಂದಿಸಿದರು.








