






ಕುಂತೂರು: ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಖ್ಯಾತ ಯೋಗ ಶಿಕ್ಷಕರಾದ ವಿಜೇಶ್ ಕೆ.ಜೆ ಬಿಳಿನೆಲೆ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ಮನಸ್ಸಿನ ಏಕಾಗ್ರತೆ, ಶಾಂತಿ ನೆಮ್ಮದಿಯನ್ನು ಕಾಪಾಡಲು ಅನುಸರಿಸಬೇಕಾದ ಯೋಗದ ಮಹತ್ವವನ್ನು ಕುರಿತು ತಿಳಿಸಿದರು.
ಪ್ರಶಿಕ್ಷಣಾರ್ಥಿಗಳಾದ ಕು| ಶಿಲ್ಪಾ ಎಂ ಹಾಗೂ ರಾಕೇಶ್ ಇವರು ಯೋಗ ದಿನಾಚರಣೆಯ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹರೀಶ್ ಕುಮಾರ್ ಟಿ ಮಾತನಾಡಿ ಪ್ರಾಚೀನ ಹಿನ್ನೆಲೆ ಇರುವ ಯೋಗವನ್ನು ದೈನಂದಿನ ಅಭ್ಯಾಸ ಕ್ರಮವಾಗಿ ರೂಡಿಸಿಕೊಳ್ಳಬೇಕು. ಮಾನಸಿಕ, ದೈಹಿಕವಾಗಿ ನಾವು ಸಧೃಢರಾಗಲು ಯೋಗ ಸಹಕಾರಿ ಎಂಬುದಾಗಿ ತಿಳಿಸಿ ಯೋಗ ದಿನಾಚರಣೆಯ ಮಹತ್ವವನ್ನು ಕುರಿತು ತಿಳಿಸಿದರು.


ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೀತಿಕಾ ಡಿ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾದ ಪ್ರಶಿಕ್ಷಣಾರ್ಥಿ ಶಿಲ್ಪಾ ಕೆ ಆರ್ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ರಕ್ಷಿತಾ ಮತ್ತು ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.





ಸಭಾ ಕಾರ್ಯಕ್ರಮದ ಬಳಿಕ ಪ್ರಶಿಕ್ಷಣಾರ್ಥಿಗಳಿಂದ ಯೋಗದ ಕುರಿತು ಸಮೂಹ ಗಾಯನ, ಯೋಗ ನೃತ್ಯಗಳನ್ನು ನಡೆದವು. ನಂತರ ಯೋಗ ತರಬೇತು ವಿಜೇಶ್ ಕೆ.ಜೆ ಬಿಳಿನೆಲೆ ಅವರು ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ಭಂಗಿಗಳ ಯೋಗಾಭ್ಯಾಸದ ಪ್ರದರ್ಶನ ನಡೆಯಿತು.








