





ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರಿನಲ್ಲಿ ಸಹಕಾರಿ ಸಂಸ್ಥೆಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಲು ಮತ್ತು ಸಹಕಾರ ಚಳುವಳಿಯ ಯಶಸ್ಸನ್ನು ಗುರುತಿಸುವ ಸಲುವಾಗಿ ಆಚರಿಸಲಾಗುವ ಅಂತರಾಷ್ಟ್ರೀಯ ಸಹಕಾರ ವರ್ಷ 2025 ರ ಸ್ಟಿಕ್ಕರ್ ಬಿಡುಗಡೆಯನ್ನು ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಬಿಡುಗಡೆ ಮಾಡಿದರು.







ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಪರಮೇಶ್ವರ ಅನಿಲ, ಸುಂದರ ಗೌಡ ಕೆಳಗಿನಕೇರಿ, ಶೀಲಾವತಿ ಮುಗರಂಜ, ವೀಣಾ ಅಂಬುಲ, ರಮೇಶ ಉಪ್ಪಡ್ಕ, ಲೋಕೇಶ್ ಆತಾಜೆ, ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ದಿವಾಕರ ಮರಕ್ಕಡ, ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಶೋಕ ಗೌಡ ಹಾಗೂಸಿಬ್ಬಂದಿಗಳು ಉಪಸ್ಥಿತರಿದ್ದರು.







