ಬಡಗನ್ನೂರು: ಮೈಂದನಡ್ಕ ನಿವಾಸಿ ಸಾರಮ್ಮ (86 ವ) ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.27ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಾರಮ್ಮ ಅವರು ನಾಟಿ ವೈದ್ಯೆಯಾಗಿ ಪರಿಚಿತರಾಗಿದ್ದರು.
ಮೃತರು ಮಕ್ಕಳಾದ ಸುಲೈಮಾನ್, ಬೀಫಾತಿಮ್ಮ, ಸೊಸೆ ಆಯಿಷಾ, ಅಳಿಯ ಅಬ್ದುಲ್ಲ ಹಾಗೂ ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು-ಬಳಗವನ್ನು ಅಗಲಿದ್ದಾರೆ.