ಎಕ್ಸ್ ನಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುವ ಪೋಸ್ಟ್ – ಪ್ರಕರಣ ದಾಖಲು

0


ಪುತ್ತೂರು: ವೈಯುಕ್ತಿಕ ವಿಚಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪೋಸ್ಟ್ ಹಾಕಿದ ಆರೋಪಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಪಕ್ಷ, ಧರ್ಮಗಳ ನಡುವೆ ಹಾಗೂ ಸಂಘಟನೆಗಳ ನಡುವೆ ವೈಮನಸ್ಸು ಉಂಟಾಗಿ, ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಂಭವ ಇರುವಂತಹ ಅಶ್ಲೀಲ ಹಾಗೂ ಅಸಂಬಧ್ಧ ಬರಹಗಳುಳ್ಳ ಪೋಸ್ಟನ್ನು ಪ್ರಸಾರ ಮಾಡಿದ್ದು, ಸದ್ರಿ ಪೋಸ್ಟನ್ನು ಪ್ರಸಾರಮಾಡಿದ ವ್ಯಕ್ತಿಯ ವಿರುದ್ದ ಜೂ.29ರಂದು ಪುತ್ತೂರು ನಗರ ಠಾಣೆಯಲ್ಲಿ ಕಲಂ- 296, 196(1)(ಎ), 353(2)ಬಿಎನ್‌ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

LEAVE A REPLY

Please enter your comment!
Please enter your name here