ಪುತ್ತೂರು: 1986ರಲ್ಲಿ ಪುತ್ತೂರಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವ ಗುರಿಯನ್ನಾಗಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್ ನ ಆರಂಭಕ್ಕೆ ಕಾರಣೀಭೂತರಾದ ಉರಿಮಜಲು ಕೆ. ರಾಮ ಭಟ್ ರ ಸ್ಮರಣಾರ್ಥವಾಗಿ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಜು.2ರಂದು ಬೆಳಿಗ್ಗೆ 10.30 ಕ್ಕೆ ನವೀಕೃತ ಉರಿಮಜಲು ಕೆ ರಾಮ್ ಭಟ್ ಸಭಾಂಗಣದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.