ಕಡಬ: ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕಡಬ ಶಾಖೆಯ ಸಕ್ರಿಯ ಸದಸ್ಯ ಜೋಸ್ ಜಾರ್ಜ್ ಯಮ್ ಅವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸಹಾಯಧನ ರೂ. 79000 ನ್ನು ಜು.1ರಂದು ಕಡಬ ಶಾಖೆಯಲ್ಲಿ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ, ಸದಸ್ಯರಾದ, ಹರೀಶ್ ಕೋಡಂದೂರು, ಲೀಲಾವತಿ ರೈ, ಬಾಲಕೃಷ್ಣ ಯು, ಸುಂದರ ಕೆ, ಕ್ಯಾ೦ಪ್ಕೋ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.