ಉದ್ಯಮಿ ದಿವಾಕರ ದಾಸ್ ನೇರ್ಲಾಜೆರವರಿಂರ ಮೈಸೂರಿನ‌ ಚಾಮೆಂಡೇಶ್ವರೀ ದೇವಿ ಕ್ಷೇತ್ರಕ್ಕೆ ರೂ 5 ಲಕ್ಷ ದೇಣಿಗೆ ಹಸ್ತಾಂತರ

0

ವಿಟ್ಲ: ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ, ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾಗಿರುವ ದಿವಾಕರ‌ ದಾಸ್ ನೇರ್ಲಾಜೆರವರು ತಮ್ಮ ಸಂಸ್ಥೆಯ ವತಿಯಿಂದ ಮೈಸೂರಿನ ಚಾಮುಂಡಿ‌‌ ಬೆಟ್ಟದಲ್ಲಿರುವ ಶ್ರೀ‌ ಚಾಮುಂಡೇಶ್ವರಿ ದೇವಿಯ ಕ್ಷೇತ್ರದಲ್ಲಿ ಆಷಾಢ ಶುಕ್ರವಾರದಂದು ಭಕ್ತಾಧಿಗಳಿಗೆ ಉಪಹಾರ ವಿತರಣೆಗಾಗಿ ರೂ 5 ಲಕ್ಷ ದೇಣಿಗೆ ನೀಡಿದರು.

ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನದಲ್ಲಿ ಆಷಾಢ ಮಾಸದಲ್ಲಿ ವಿಶೇಷವಾಗಿದ್ದು, ಈ‌ ಸಂದರ್ಭದಲ್ಲಿ ಪಾದಾಯಾತ್ರೆಯ ಮೂಲಕ ಸೇರಿದಂತೆ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಈ‌ ಸಂದರ್ಭದಲ್ಲಿ ಭಕ್ತಾದಿಗಳಿಗೆ ಉಪಹಾರ ವಿತರಣೆ ಮಾಡುವ ನಿಟ್ಟಿನಲ್ಲಿ ಈ ದೇಣಿಗೆ ಹಸ್ತಾಂತರ ಮಾಡಿದರು.

ದಿವಾಕರ ದಾಸ್ ನೇರ್ಲಾಜೆರವರು 5 ಲಕ್ಷ ರೂ. ಮೊತ್ತದ ಚೆಕ್‌‌ ಅನ್ನು ಮೈಸೂರಿನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮೈಸೂರು ಕಾಂಗ್ರೇಸ್‌ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್, ಮೈಸೂರು ಡಿಸಿಸಿ ಪ್ರಧಾನ ಕಾರ್ಯದರ್ಶಿ ಜಯರಾಮ್, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷರಾದ ಮಲ್ಲೇಶ್, ಉದ್ಯಮಿಗಳು ಜೆಜೆ ಆನಂದ್, ಬೆಂಗಳೂರಿನ ಜಿಕೆ ಫೌಂಡೇಶನ್ ನ ಅಧ್ಯಕ್ಷರಾದ ಮಹೇಶ್, ಡಿಸಿಸಿ ಕಾರ್ಯದರ್ಶಿ ರಾಹುಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here