ಪುತ್ತೂರು: ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಜುಲೈ 1ರಂದು ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ಪುತ್ತೂರಿನ ಹಿರಿಯ ವೈದ್ಯರಾದ ಡಾ. ಗೌರಿ ಪೈ, ಹೆರಿಗೆ ತಜ್ಞರು ಹಾಗೂ ಡಾ. ಎಂ ಎಸ್ ಭಟ್ ಪಶು ಶಸ್ತ್ರಚಿಕಿತ್ಸಾ ತಜ್ಞರು ಅವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು.
ಇಳಿ ವಯಸ್ಸಿನಲ್ಲಿರುವ ಇವರೀರ್ವರೂ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕಿರಿಯರಿಗೆ ಪ್ರೇರಣಾದಾಯಿಯಾಗಿರುವ ಇವರಿಗೆ ಇನ್ನರ್ ವೀಲ್ ಕ್ಲಬ್ ಪುತ್ತೂರು ಸದಸ್ಯರೆಲ್ಲರ ಪರವಾಗಿ ವೈದ್ಯರ ದಿನದ ಶುಭವನ್ನು ಕೋರಲಾಯಿತು.
ಕೃಷ್ಣವೇಣಿ ಮುಳಿಯ ಹಾಗೂ ಪ್ರಮೀಳಾರಾವ್ ಅವರ ಸಾಧನೆಗಳನ್ನು ತಿಳಿಸಿದರು. ಸದಾಶಿವ ಪೈ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ರೂಪಲೇಖ, ಸಂಸ್ಥೆಯ ಕಾರ್ಯದರ್ಶಿ ಸಂಧ್ಯಾ ಸಾಯ ಹಾಗೂ ವೇದಾಲಕ್ಷ್ಮಿಕಾಂತ್, ವೀಣಾ ಕೊಳತ್ತಾಯ, ಶಂಕರಿ ಎಂ ಎಸ್ ಭಟ್, ಶಾಂತಿ ಶೆಣೈ, ಜಯಶ್ರೀ ಪಡಿವಾಳ್, ಸಂಧ್ಯಾ ಶಶಿಧರ್ ಸುಷ್ಮಾ ಜೈನ್ ಉಪಸ್ಥಿತರಿದ್ದರು.