ಪುತ್ತೂರು: ಸವಣೂರು ಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು. ಚುನಾವಣೆ ಘೋಷಣೆ ನಂತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ನಡೆಯಿತು. ನಂತರ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆ ನೀಡಲಾಯಿತು. ವಿದ್ಯಾರ್ಥಿಗಳು ತಮಗೆ ನೀಡಿರುವ ಗುರುತಿನ ಚಿಹ್ನೆಯೊಂದಿಗೆ ಪ್ರಚಾರ ಕೈಗೊಂಡರು. ಚುನಾವಣೆಯ ದಿನದಂದು ಶಾಲಾ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ ಗುರುತಿನ ಚೀಟಿಯ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಶೇಕಡಾ 98 ಮತದಾನ ನಡೆಯಿತು.

ವಿಶೇಷವಾಗಿ ಮೊಬೈಲ್ ಇ.ವಿ.ಯಂ ಆಪ್ ಮೂಲಕ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳೆಲ್ಲರೂ ಪಾಲ್ಗೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು. ಮುಖ್ಯಮಂತ್ರಿಯಾಗಿ ಎ ಫಾತಿಮಾ ಅಲ್ಫಾ, ಉಪಮುಖ್ಯಮಂತ್ರಿಯಾಗಿ ಮಹಮದ್ ಅಲಿ ಶಾಹಿದ್, ಗೃಹಮಂತ್ರಿಯಾಗಿ ಮಹಮದ್ ಶಾಝಿನ್, ಮುಹಮ್ಮದ್ ಮುಂಝೀರ್, ನೀರಾವರಿ ಮಂತ್ರಿಗಳಾಗಿ ಅಬ್ದುಲ್ ಗಫೂರ್ ಎಂ, ಮುಹಮ್ಮದ್ ಅಫಾಜ್ ಕೃಷಿಮಂತ್ರಿಗಳಾಗಿ ಸುಮಂತ್, ಮಹಮ್ಮದ್ ಅನ್ಸಾಫ್, ಕ್ರೀಡಾ ಮಂತ್ರಿಗಳಾಗಿ ಮುಹಮ್ಮದ್ ಸಬೀಬ್, ಮುಹಮ್ಮದ್ ರಝ್ವೀನ್, ಸ್ವಚ್ಛತಾ ಮಂತ್ರಿಗಳಾಗಿ ಅಬ್ದುಲ್ ಮಲೀಕ್, ಫಾತಿಮತ್ ನುಸೈಭಾ, ಆಹಾರ ಮಂತ್ರಿಗಳಾಗಿ ಶ್ರೀನಿಕಾ ಯಂ, ಮುಹಮ್ಮದ್ ಶಹೀದ್, ಸುಖ್ರಂಮುಂಡು, ಆಯಿಷಾ ರಾಫಿದ, ಫಾತಿಮತ್ ತಸ್ರಿಯ, ಗ್ರಂಥಾಲಯ ಮಂತ್ರಿಗಳಾಗಿ ಆಯಿಷತ್ ತಸ್ರೀಫ, ಆಮಿನತ್ ಶೈಫಾ, ಶಿಕ್ಷಣ ಮಂತ್ರಿಗಳಾಗಿ ಫಾತಿಮತ್ ಅಸ್‌ಫಿಯಾ, ಸಿಯಾನ, ಸಾಂಸ್ಕೃತಿಕ ಮಂತ್ರಿಗಳಾಗಿ ಫಾತಿಮತುಲ್ ಹನ, ಫಾತಿಮತ್ ಸನ ಎಂ ಆಯ್ಕೆಯಾದರು. ಶಾಲಾ ಹಿರಿಯ ಶಿಕ್ಷಕಿ ಜಾನಕಿ, ಸಹ ಶಿಕ್ಷಕರುಗಳಾದ ಸವಿತಾ, ಗುಲ್ಸನ್ ಕೌಸರ್, ಕು.ದಯಾಮಣಿ. ಕೆ ಗಾಯತ್ರಿ ಚುನಾವಣಾಧಿಕಾರಿಗಳಾಗಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.