ಪುತ್ತೂರು: ಕೃಷ್ಣ ನಗರ ಕೃಷ್ಣ ಕಾಂಪ್ಲೆಕ್ಸ್ ಮಾಲೀಕ , ಅದೇ ಸಂಕೀರ್ಣದಲ್ಲಿ ಶ್ರೀ ಮಹಾಲಿಂಗೇಶ್ವರ ಶೀಟ್ ಮೆಟಲ್ ವರ್ಕ್ಸ್ ಮಳಿಗೆಯನ್ನು ಹೊಂದಿರುವ ಕೃಷ್ಣ ನಗರ ನಿವಾಸಿ ಶೀನ ನಾಯ್ಕ (75) ಜು.1ರಂದು ಎರಡು ದಿನಗಳ ಅನಾರೋಗ್ಯ ದಿಂದ ನಿಧನರಾಗಿದ್ದಾರೆ.

ಮೃತರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸದಸ್ಯರು ಕೂಡ ಆಗಿದ್ದು, ಪತ್ನಿ ಮೀನಾಕ್ಷಿ, ಪುತ್ರರಾದ ಗೋಪಾಲಕೃಷ್ಣ ಹಾಗೂ ಕುಂದಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರೋಹಿತ್, ಸೊಸೆಯಂದಿರಾದ ಕವಿತಾ ಮತ್ತು ಮಂಗಳಾ ಹಾಗೂ ಮೂವರು ಮೊಮ್ಮಕ್ಕಳ ಸಹಿತ ಕುಟುಂಬ ವರ್ಗವನ್ನು ಅಗಲಿದ್ದಾರೆ.