ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪರ್ಪುಂಜ ಶಾಲೆಯ 2025-26ನೇ ಸಾಲಿನ ನೂತನ ಮಂತ್ರಿಮಂಡಲ ರಚನೆಯಾಯಿತು.
ಶಾಲಾ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ಶಾಲಾ ಮುಖ್ಯಗುರುಗಳು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಶಾಲಾ ನಾಯಕನಾಗಿ 7ನೇ ತರಗತಿಯ ಮೊಹಮ್ಮದ್ ಇಸ್ತಿಯಾಖ್, ಉಪನಾಯಕಿಯಾಗಿ 6ನೇ ತರಗತಿಯ ಕದೀಜತ್ ಶಝೀನಾ ಆಯ್ಕೆಯಾದರು.

ಶಿಕ್ಷಣ ಮಂತ್ರಿಯಾಗಿ ಅಫ್ರಾನ್ ಮತ್ತು ಅಷ್ಪಾಕ್, ಗ್ರಹಮಂತ್ರಿಯಾಗಿ ಹಸ್ತಾ ಎಸ್. ಆರ್. ಮತ್ತು ಮೋಕ್ಷಿತಾ ಪಿ. ಜೆ., ಆರೋಗ್ಯಮಂತ್ರಿಯಾಗಿ ಸಾನ್ವಿ ಪಿ. ಮತ್ತು ತಸ್ವಿತ, ಕ್ರೀಡಾಮಂತ್ರಿಯಾಗಿ ಧನ್ವಿತಾ ಮತ್ತು ಅನಾನ್, ಸಾಂಸ್ಕೃತಿಕ ಮಂತ್ರಿಯಾಗಿ ತೇಜಶ್ರೀ ಪಿ.ವಿ ಮತ್ತು ಲಿಖಿತ್, ಆಹಾರ ಮಂತ್ರಿಯಾಗಿ ಆರಾಧ್ಯ ಮತ್ತು ಶಝೀನಾ ಹಾಗೂ ವಿರೋಧ ಪಕ್ಷ ನಾಯಕರಾಗಿ ಶ್ರಾವಣಿ, ಕುಶಿತ್, ತನುಶ್ರೀ ಮತ್ತು ಫಾತಿಮತ್ ಮಿನ್ಹಾ ಮೊದಲಾದವರನ್ನು ಆಯ್ಕೆಮಾಡಲಾಯಿತು.
ಮುಖ್ಯಗುರು ಚಂದ್ರಾವತಿ ಕೆ. ಇವರ ನೇತೃತ್ವದಲ್ಲಿ ನಡೆದ ಮಂತ್ರಿಮಂಡಲ ರಚನಾ ಪ್ರಕ್ರಿಯೆಯಲ್ಲಿ ಶಿಕ್ಷಕರಾದ ಶಾಂತಿ ಮೊರಾಸ್, ಜಯಮಾಲ ಪಿ. ಎನ್. ಹಾಗೂ ವಿಜಯಲಕ್ಷ್ಮೀ ಕೆ. ಸಹಕರಿಸಿದರು.