ಪುತ್ತೂರು:ಜು.1 ರಂದು ಆಚರಿಸಲ್ಪಡುವ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಎಲೈಟ್ ಆಶ್ರಯದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

5 ದಶಕಗಳ ಕಾಲ ಪತ್ರಕರ್ತರಾಗಿ ‘ ಪ್ರಾಧ್ಯಾಪಕರಾಗಿ ಹಾಗೂ ಲೇಖಕರಾಗಿ ಸೇವೆ ಸಲ್ಲಿಸಿದ ಪ್ರೊ|ವಿ.ಬಿ ಅರ್ತಿಕಜೆಯವರನ್ನು ಪರ್ಲಡ್ಕ ಅವರ ಮನೆಯಲ್ಲಿ, ಹಿರಿಯ ವೈದ್ಯರಾದ ಡಾ.ರಮಾದೇವಿಯವರನ್ನು ದರ್ಬೆ ಅವರ ಮನೆಯಲ್ಲಿ ಶಾಲು ಹೊದಿಸಿ ಗೌರವಾರ್ಪಣೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ, ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಕನ್ನಡ ಪತ್ರಿಕಾ ಕ್ಷೇತ್ರದ ಬಗ್ಗೆ ಹಾಗೂ ವೈದ್ಯ ದಿನಾಚರಣೆ ಬಗ್ಗೆ ಮಾತನಾಡಿ, ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಸಿಲ್ವಿಯ ಡಿಸೋಜ , ಕಾರ್ಯದರ್ಶಿ ಪದ್ಮಾವತಿ ಮೋಹನ್, ನಿರ್ದೇಶಕರಾದ ಆಸ್ಕರ್ ಆನಂದ್, ರಾಮ ಕೆ, ಪ್ರೊ|ಆರ್ತಿಕಜೆರವರ ಪತ್ನಿ ಭಾಗ್ಯಲಕ್ಷ್ಮೀ, ಡಾ.ರಮಾದೇವಿಯವರ ಪುತ್ರ ಡಾ.ಅನಿಲ್ ಹಾಗೂ ಅವರ ಪತ್ನಿ ಉಪಸ್ಥಿತರಿದ್ದರು.