ಪುತ್ತೂರು: ಜು.1ರಂದು ಆಚರಿಸಲ್ಪಡುವ ವೈದ್ಯರ ದಿನಾಚರಣೆ ಸಂದರ್ಭದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ವೈದ್ಯರುಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉಪ್ಪಿನಂಗಡಿಯ ವೈದ್ಯರುಗಳಾದ ಕ್ಲಬ್ ಮಾಜಿ ಅಧ್ಯಕ್ಷ, ಪ್ರಸ್ತುತ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿರುವ ಡಾ.ರಾಜಾರಾಮ್ ಕೆ.ಬಿ, ಡಾ.ನಿರಂಜನ್ ರೈ, ಡಾ.ಎಂ.ಆರ್ ಶೆಣೈ, ಡಾ.ಎಂ.ಎನ್ ಭಟ್, ಡಾ.ಕೆ.ಜಿ ಭಟ್, ಡಾ.ಕೃಷ್ಣಪ್ರಸಾದ್, ಡಾ.ಯತೀಶ, ಡಾ.ಶೌರಿ ರೈ, ಪುತ್ತೂರಿನ ಡಾ.ಶ್ಯಾಂರವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.