ಪುತ್ತೂರು: ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಜು.6 ರಂದು ಬೆಳಿಗ್ಗೆ 9ರಿಂದ
ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಪುತ್ತೂರು ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಶಶಿಧರ್ ನಾೖಕ್ ರವರ ಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಮಂಗಳೂರಿನ ಸೀನಿಯರ್ ಮ್ಯಾನೇಜರ್ ಜಯರಾಮ ನಾೖಕ್ ಉದ್ಘಾಟಿಸಲಿದ್ದು, ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾೖಕ್ ಕೊಳಕ್ಕಿಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರೂನಗರ ಸಮೃದ್ದಿ ಕನ್ಸ್ಟ್ರಕ್ಷನ್ನ ಸುಧೀರ್ ಪ್ರಸಾದ್ ಎ., ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿರ್ದೇಶಕ ಹರೀಶ್ ನಾೖಕ್ ಅಜೇಯನಗರ, ಕೆಸರು ಗದ್ದೆಗೆ ಸ್ಥಳಾವಕಾಶ ಒದಗಿಸಿದ ಶಶಿಧರ್ ನಾೖಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರೆಂದು ಸಂಘದ ಪ್ರಕಟಣೆ ತಿಳಿಸಿದೆ.