ಸವಣೂರು: ಸವಣೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಎಲ್.ಕೆ.ಜಿ & ಯು.ಕೆ.ಜಿ ತರಗತಿಯ ಮಕ್ಕಳಿಗೆ ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ರಿ ವತಿಯಿಂದ ಫೈಬರ್ ಚಯರ್ ವಿತರಣಾ ಕಾರ್ಯಕ್ರಮವು ಜುಲೈ 2, ಬುಧವಾರದಂದು ನಡೆಯಿತು.
ಅಂದು ನಡೆದ ಎಲ್.ಕೆ.ಜಿ & ಯು.ಕೆ.ಜಿ ಪ್ರಾರಂಭೋತ್ಸವದಂದು ಟ್ರಸ್ಟ್‌ನ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಸಹಲ್ ಅವರು ಶಾಲಾ ಮುಖ್ಯಗುರು ನಿಂಗರಾಜು ಕೆ.ಪಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಅಶ್ರಫ್ ಜನತಾ ಇವರಿಗೆ ಚಯರ್‌ಗಳನ್ನು ಹಸ್ತಾಂತರಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಶ್ರೀ ಕುಚ್ಚೆಜಾಲು, ಸದಸ್ಯರಾದ ರಫೀಕ್ ಎಂ.ಎ, ಚಂದ್ರಾವತಿ ಸುಣ್ಣಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜೊತೆ ಕಾರ್ಯದರ್ಶಿ ಸಫ್ವಾನ್ ಸವಣೂರು, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಶಿವರಾಮ ಮೆದು, ಟ್ರಸ್ಟ್ ಕಾರ್ಯದರ್ಶಿ ಫಾರೂಕ್ ಬಿ ಎಂ ಸ್ಟೋರ್, ಜೊತೆ ಕಾರ್ಯದರ್ಶಿ ಸವಾದ್ ಪಟ್ಟೆ, ಸದಸ್ಯ ಯಾಕೂಬ್ ಸವಣೂರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ನಿಸಾರ್ ಸವಣೂರು, ಎಸ್ ಡಿ ಎಂ ಸಿ ಸದಸ್ಯರುಗಳು ಹಾಗೂ ಅಧ್ಯಾಪಕವೃಂದದವರು ಉಪಸ್ಥಿತರಿದ್ದರು.