
ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಜು.5ರಂದು ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೃಷಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರವರ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ 2018ರಲ್ಲಿ ಪ್ರಾರಂಭವಾದ ಸಂಘದ ಪ್ರಥಮ ಅಧ್ಯಕ್ಷರಾಗಿ ಉಮೇಶ್ ಮಿತ್ತಡ್ಕ, ಬಳಿಕ ಸದಾಶಿವ ಶೆಟ್ಟಿ ಮಾರಂಗ, ಯೂಸುಫ್ ರೆಂಜಲಾಡಿ, ತಿಲಕ್ ರೈ ಕುತ್ಯಾಡಿ, ಶೈಲಜ ಸುದೇಶ್ ಸಂಘದ ಅಧ್ಯಕ್ಷತೆ ವಹಿಸಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರಾರಂಭದಲ್ಲಿ 12 ಸದಸ್ಯರನ್ನು ಹೊಂದಿದ್ದ ಸಂಘ ಈಗ 44 ಸದಸ್ಯರನ್ನು ಒಳಗೊಂಡಿದೆ. ಇನ್ನು ಮುಂದೆಯೂ ಸಂಘ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದ ಅವರು ಸಂಘದ ಕಾರ್ಯಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ವಾರ್ಷಿಕ ವರದಿ ಮಂಡಿಸಿದ ಸಂಘದ ಅಧ್ಯಕ್ಷೆ ಶೈಲಜಾ ಸುದೇಶ್, ಸಂಘದ ಈವರೆಗಿನ ಕಾರ್ಯಕ್ರಮಗಳ ಮಾಹಿತಿ ನೀಡಿ ಸಂಘದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿಯೋಜಿತ ಆಧ್ಯಕ್ಷ ಶ್ರೀಧರ್ ರೈ ಮಾತನಾಡಿ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.



ಸನ್ಮಾನ: ಸಂಘದ 2023-2024 ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸಂಘವನ್ನು ಮುನ್ನಡೆಸಿದ್ದ ತಿಲಕ್ ರೈ ಕುತ್ಯಾಡಿಯವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ತನ್ನ ಅಧಿಕಾರಾವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘವನ್ನು ಮುನ್ನಡೆಸಲು ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು. ಬಳಿಕ ಜಿಲ್ಲಾಧ್ಯಕ್ಷ ಸುದೇಶ್ ಅವರಿಗೆ ಸಂಘದ ಅಧ್ಯಕ್ಷೆ ಶೈಲಜಾ ಅವರು ಸ್ಮರಣಿಕೆ ನೀಡಿ ಗೌರವಿಸಿದರು.


ಅಧಿಕಾರ ಹಸ್ತಾಂತರ: ಸಂಘದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ನಿಯೋಜಿತ ಅಧ್ಯಕ್ಷ ಶ್ರೀಧರ್ ರೈಯವರಿಗೆ ಸಂಘದ ಅಧ್ಯಕ್ಷೆ ಶೈಲಜಾ ಸುದೇಶ್ ಸಂಘದ ಪುಸ್ತಕ ಹಸ್ತಾಂತರಿಸಿದರು. ರಕ್ಷಿತಾ ವರುಣ್ ಲೆಕ್ಕಪತ್ರ ಮಂಡಿಸಿದರು. ಶರತ್ ಕುಮಾರ್ ಪಾರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಸನ್ಮಾರ್ಗ ಟಿವಿ ನಿರೂಪಕಿ ಪ್ರಿಯಾ ಸುದೇಶ್, ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು, ನಿಯೋಜಿತ ಜೊತೆ ಕಾರ್ಯದರ್ಶಿ ಲೋಕಯ್ಯ ಗೌಡ ಉಪ್ಪಿನಂಗಡಿ, ಉಪಾಧ್ಯಕ್ಷ ಶಿವಕುಮಾರ್ ಈಶ್ವರಮಂಗಲ, ಕೋಶಾಧಿಕಾರಿ ಅಕ್ಷತಾ ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ, ಸಂಘದ ಸದಸ್ಯರಾದ ಪ್ರೀತಾ, ಜಯಲಕ್ಷ್ಮೀ, ಕಾವ್ಯ ಬಿ, ರಾಜೇಶ್ ಎಸ್, ರಾಕೇಶ್ ನಾಯಕ್ ಮಂಚಿ, ಕುಶಾಲಪ್ಪ, ಪ್ರಶಾಂತ್ ಮಿತ್ತಡ್ಕ, ನರೇಶ್ ಜೈನ್, ಸದಾಶಿವ ಶೆಟ್ಟಿ ಮಾರಂಗ, ನವ್ಯ, ಹಿಲರಿ ಡಿ’ಸೋಜ, ಕಾರ್ತಿಕ್ ಕೆ., ಚಂದ್ರಕಾಂತ್ ಉರ್ಲಾಂಡಿ, ಗಂಗಾಧರ್ ಸಿ.ಎಚ್., ರಮೇಶ್ ಕೆಮ್ಮಾಯಿ, ಗೋಪಾಲಕೃಷ್ಣ ಮಾಡಾವು, ಶರತ್ ಕುಮಾರ್ ಪಾರ, ಎಂ. ಮೋಹನ್ ಶೆಟ್ಟಿ, ರೇಷ್ಮಾ, ಸುಮಿತ್ರಾ, ವಿಶಾಲಾಕ್ಷಿ, ಲತೇಶ್, ನಾಗೇಂದ್ರ, ಅಕ್ಷಯ್ ಸಭೆಯಲ್ಲಿ ಭಾಗಿಯಾಗಿದ್ದರು.
ಸಂಘದ ಕೋಶಾಧಿಕಾರಿ ಕವಿತಾ ವಿಶ್ವನಾಥ್, ರಕ್ಷಿತಾ, ಚಿತ್ರಾಂಗಿನಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಜೊತೆ ಕಾರ್ಯದರ್ಶಿ ದಿಲ್ ಶಾನ ಶರೀಫ್ ಕುಂಬ್ರ ವಂದಿಸಿದರು.