ಗೌರವಾಧ್ಯಕ್ಷ: ಪ್ರಕಾಶ್ ಮುಕ್ರಂಪಾಡಿ,ಅಧ್ಯಕ್ಷ: ಅನ್ವೇಶ್ ರೈ,ಕಾರ್ಯದರ್ಶಿ:ಸೂರಜ್ ನಂದ,ಜೊತೆ ಕಾರ್ಯದರ್ಶಿ:ರಚಿತಾ ಆರ್
ಪುತ್ತೂರು: ಮಾಯಿದೆ ದೇವುಸ್ ವಿದ್ಯಾಸಂಸ್ಥೆಯ ಆಡಳಿತಕ್ಕೊಳಪಟ್ಟ ಸಂತ ಫಿಲೋಮಿನಾ ಕಾಲೇಜು ಶ್ರೀ ಗಣೇಶೋತ್ಸವ ಹಿರಿಯ ವಿದ್ಯಾರ್ಥಿ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ನಡೆಯುವ ಶ್ರೀ ಗಣೇಶೋತ್ಸವಕ್ಕೆ 43ರ ಸಂಭ್ರಮವಾಗಿದೆ.
ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಹಾಗೂ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ ಸಭೆಯಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಪ್ರಕಾಶ್ ಮುಕ್ರಂಪಾಡಿ, ಅಧ್ಯಕ್ಷರಾಗಿ ಅನ್ವೇಶ್ ರೈ, ಕಾರ್ಯದರ್ಶಿಯಾಗಿ ಸೂರಜ್ ನಂದ ಕೆ, ಶಿವಪ್ರಸಾದ್, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ರಚಿತಾ ಆರ್ ಕಲ್ಲಾರೆರವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಅಭಿರಾಮ್ ಎಚ್, ಮನ್ವಿತ ಜಿ, ವಿಷ್ಣುಪ್ರಕಾಶ ಎಸ್, ಧನುಷ್ ಪಿ.ಡಿ, ಆಕಾಶ್ ಜಿ.ಎಲ್, ಸೃಜನ್ ಎ, ಪ್ರತೀಕ್ಷಾ, ಲತಿನ್ ಎನ್, ಆಕಾಶ್ ಸಾಲ್ಯಾನ್, ಕೀರ್ತನ್ ಸಿ, ಶ್ರವಣ್ ಬಿ, ಧನುಷ್, ಪ್ರಥ್ವಿ ಕೆ, ಆದಿತ್ಯ ಶೆಟ್ಟಿ, ಆಕಾಶ್ ರೈ, ಮಧುರಾ ರೈ, ಆಕಾಶ್ ರೈ, ಅಹಿಜಿತ, ಲಿಖಿತಾ ಜೆ.ಡಿ, ಅಭಿಜಿತ್ ಸಹಿತ ಮತ್ತಿತರರನ್ನು ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಯಿತು.