ಲೇಖನ: ಉಮಾಪ್ರಸಾದ್ ನಡುಬೈಲು
ಪುತ್ತೂರು: ಹರ್ಷ ವರ್ಧನ ಪಿ.ಆರ್.ರವರು ಪುತ್ತೂರಿನವರು, ಇವರು ಪ್ರಸ್ತುತ ಪ್ರಾಧ್ಯಾಪಕರಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ವಿಭಾಗ, ಆಳ್ವಾಸ್ (ಸ್ವಾಯತ್ತ) ಕಾಲೇಜು, ಮೂಡುಬಿದಿರೆ ಇಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಹಿರಿಯ ಸಾಹಿತಿ ದಿ. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್- ಸುಮಾ ಆರ್. ಆಚಾರ್ ಇವರ ಪುತ್ರನಾಗಿರುವ ಹರ್ಷವರ್ಧನರವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಸುಮಾರು 20 ವರ್ಷಗಳ ಕಾಲ ರಾಜ್ಯದ ಕಲ್ಬುರ್ಗಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವೃತ್ತಿ ನಿರ್ವಹಣೆ, ರಾಜಕೀಯ, ಕ್ರೈಂ, ಕ್ರೀಡೆ, ಸಿನಿಮಾ, ಕೃಷಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ವರದಿಗಾರಿಕೆ ಮಾಡಿರುತ್ತಾರೆ.

ಇದಕ್ಕೂ ಪೂರ್ವದಲ್ಲಿ ಕನ್ನಡ- ಇಂಗ್ಲಿಷ್ ಡಿಜಿಟಲ್ ಮಾಧ್ಯಮ ಹಾಗೂ ತಾಂತ್ರಿಕ ಬರಹಗಾರರಾಗಿ ಬೆಂಗಳೂರು, ಚೆನ್ನೈನಲ್ಲಿ ವೃತ್ತಿಯನ್ನು ನಡೆಸಿದ್ದಾರೆ.
ಕನ್ನಡಪ್ರಭ ಉಪಸಂಪಾದಕ, ದೂರದರ್ಶನದಲ್ಲಿ ಅರೆಕಾಲಿಕ ಉಪಸಂಪಾದಕನಾಗಿ ಕೆಲಸ ನಿರ್ವಹಣೆಯನ್ನು ಮಾಡಿರುವ ಇವರು ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದ ಸಮೂಹ ಸಂವಹನ ವಿಭಾಗದಲ್ಲಿ ಸಿನಿಮಾ ಸಂಶೋಧನಾ ವಿಧ್ಯಾರ್ಥಿಯಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ(MS.Communication)
ಮಂಗಳೂರು ವಿಶ್ವವಿದ್ಯಾಲಯದ ಉಜಿರೆ ಎಸ್ ಡಿ ಎಂ ಕಾಲೇಜಿನಿಂದ (ಪತ್ರಿಕೋದ್ಯಮ/ಇಂಗ್ಲಿಷ್/ ರಾಜ್ಯಶಾಸ್ತ್ರ) ಕಲಾ ಪದವಿಯನ್ನು ಪಡೆದಿರುತ್ತಾರೆ.
ಪುತ್ತೂರು ಸಂತ ಫಿಲೋಮಿನಾ ಕಾಲೇಜು ಮತ್ತು ಬೋರ್ಡ್ ಹೈಸ್ಕೂಲು, ಕೆಯ್ಯೂರು ಹಾಗೂ ಪಾಲ್ತಾಡಿ ಸರಕಾರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಮೂಡುಬಿದಿರೆಯಲ್ಲಿ ವಾಸವಾಗಿದ್ದಾರೆ.