ರೋಟರಿ ಪುತ್ತೂರು ಈಸ್ಟ್ ಪದ ಪ್ರದಾನ

0

ರೋಟರಿಯಿಂದ ಮಾನವೀಯ ಸಂಬಂಧಗಳಿಗೆ ಬೆಲೆ-ಡಾ.ರವಿ ಅಪ್ಪಾಜಿ

ಪುತ್ತೂರು: ಸಮಾಜದಲ್ಲಿ ನಾವು ಜೀವಿಸುವಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿಯಬೇಕು ಜೊತೆಗೆ ಒಳ್ಳೆಯವರ ಸಂಗವನ್ನು ಮಾಡಿದಾಗ ಸಮಾಜದಲ್ಲಿ ಸೂಕ್ತ ಸ್ಥಾನಮಾನವನ್ನು ಸಂಪಾದಿಸಬಹುದು. ರೋಟರಿ ಸಂಸ್ಥೆಯು ಸಾಕಷ್ಟು ಸೇವಾ ಕಾರ್ಯಗಳನ್ನು ಸಮಾಜಕ್ಕೆ ನೀಡಿದೆ. ರೋಟರಿ ಸಂಸ್ಥೆಯು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತದೆ ಎಂದು ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3180, ಇದರ ಪಿಡಿಜಿ ಡಾ.ರವಿ ಅಪ್ಪಾಜಿರವರು ಹೇಳಿದರು.


ಜು.6 ರಂದು ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸಂಜೆ ಜರಗಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು.

ಚಿತ್ರ:ನವೀನ್ ರೈ ಪಂಜಳ


ಪಲ್ಸ್ ಪೋಲಿಯೊಗೆ ಆರ್ಥಿಕ ಶಕ್ತಿ ತುಂಬಿ-ಪ್ರಮೀಳಾ ರಾವ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್‌ರವರು ಕ್ಲಬ್‌ನ ವಾರ್ಷಿಕ ಬುಲೆಟಿನ್ ಅನ್ನು ಅನಾವರಣಗೊಳಿಸಿ ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿಯಲ್ಲಿ ಏಳು, ಜಿಲ್ಲಾ ರೋಟರಿಯಲ್ಲಿ ಐದು ವಲಯಗಳಲ್ಲಿನ ಯೋಜನೆಗಳಿಗೆ ರೊಟೇರಿಯನ್ಸ್‌ಗಳು ಮತ್ತಷ್ಟು ಶಕ್ತಿ ತುಂಬಬೇಕು. ಪೋಲಿಯೊ ನಿರ್ಮೂಲನೆಗೆ ರೋಟರಿಯು ಮಹತ್ತರ ಹೆಜ್ಜೆಯನ್ನಿಟ್ಟಿರುವುದು ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿ ಅಂತರ್ರಾಷ್ಟ್ರೀಯ ರೋಟರಿ ಫಂಡಿಗೆ ಆರ್ಥಿಕ ಶಕ್ತಿ ತುಂಬಲು ಪಲ್ಸ್ ಪೋಲಿಯೊ ಬಾಕ್ಸ್ ಅನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿ ಬಾಕ್ಸ್‌ಗೆ ಮೊದಲಾಗಿ ಹಣವನ್ನು ಜಮೆ ಮಾಡುವ ಮೂಲಕ ಚಾಲನೆ ನೀಡಿದರು.


ಧನಾತ್ಮಕ ಧೋರಣೆ ಮೈಗೂಡಿಸಿದಾಗ ಸಮಾಜದಲ್ಲಿ ಇಂಪ್ಯಾಕ್ಟ್-ಭರತ್ ಪೈ:
ರೋಟರಿ ವಲಯ ಸೇನಾನಿ ಭರತ್ ಪೈ ಮಾತನಾಡಿ, ರೋಟರಿ ಈಸ್ಟ್ ಕ್ಲಬ್ ಕಳೆದ ವರ್ಷ ಐಕಾನಿಕ್ ಪ್ರಾಜೆಕ್ಟ್‌ಗಳನ್ನು ಮಾಡುವ ಮೂಲಕ ಡೈಮಂಡ್ ಪ್ರಶಸ್ತಿಗೆ ಭಾಜನರಾಗಿರುವುದು ಶ್ಲಾಘನೀಯ. ಅಂತರ್ರಾಷ್ಟ್ರೀಯ ರೋಟರಿ ಧ್ಯೇಯವಾಕ್ಯವಾದ ಒಳ್ಳೆಯ ಕೆಲಸಗಳಿಗೆ ಒಂದಾಗೋಣ ಎಂಬಂತೆ ನಾವೆಲ್ಲಾ ಧನಾತ್ಮಕ ಧೋರಣೆಯನ್ನು ಮೈಗೂಡಿಸಿಕೊಂಡಾಗ ಅದು ಸಮಾಜದಲ್ಲಿ ಇಂಪ್ಯಾಕ್ಟ್ ಎನಿಸಿಕೊಳ್ಳುತ್ತದೆ ಎಂದರು.


ಯಾವುದೇ ಸ್ಥಾನದಲ್ಲಿದ್ದರೂ ಮೊದಲು ನಮ್ಮೊಳಗೆ ಒಬ್ಬನಿದ್ದಾನೆ ಮನಗಾಣಿ-ಡಾ.ಶ್ರೀಪ್ರಕಾಶ್:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ಸಮಾಜದಲ್ಲಿ ನಾವು ಯಾವುದೇ ಸ್ಥಾನದಲ್ಲಿದ್ದರೂ ಮೊದಲು ನಮ್ಮೊಳಗೆ ಒಬ್ಬ ಇದ್ದಾನೆ ಎಂಬುದನ್ನು ಮನಗಾಣಬೇಕು. ನಾವು ಮಾಡುವ ಒಳ್ಳೆಯ ಕೆಲಸಗಳು ನಮಗೆ ನಿಜವಾಗಿಯೂ ತೃಪ್ತಿ ಕೊಡುತ್ತದೆ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿಯು ನಿಸ್ವಾರ್ಥವಾಗಿ ಬರಲಿ ಎಂದರು.


ಸ್ವ-ಹಿತ ಮೀರಿದ ಸೇವೆ ನಮ್ಮದಾಗಲಿ-ಡಾ.ರವಿಪ್ರಕಾಶ್:
ಕ್ಲಬ್ ನಿರ್ಗಮಿತ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ಮಾತನಾಡಿ, ರೋಟರಿ ಭೀಷ್ಮ ಕೆ.ಆರ್ ಶೆಣೈರವರ ಮಾರ್ಗದರ್ಶನ ಹಾಗೂ ಕ್ಲಬ್ ಸದಸ್ಯರ ಪ್ರೋತ್ಸಾಹದೊಂದಿಗೆ ಕ್ಲಬ್ ಹಮ್ಮಿಕೊಂಡ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಸ್ವ-ಹಿತ ಮೀರಿದ ಸೇವೆಯೊಂದಿಗೆ ಬದ್ಧತೆಯಿಂದ ಸಮಾಜಮುಖಿ ಸೇವೆಗಳನ್ನು ಹಮ್ಮಿಕೊಂಡ ಬಗ್ಗೆ ತೃಪ್ತಿಯಿದೆ ಎಂದರು.


8 ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ನ್ಯಾಯವಾದಿ ಆದರ್ಶ ರೈ ಕೆದಂಬಾಡಿ, ನಂದಿಕೇಶ ಇಲೆಕ್ಟ್ರಿಕಲ್ಸ್ ಮಾಲಕ ಕೇಶವ ಪೂಜಾರಿ ಬೆದ್ರಾಳ, ಕೃಷಿಕರಾದ ಹೊನ್ನಪ್ಪ ಪೂಜಾರಿ ಕೈಂದಾಡಿ ಶಾಂತಿಗೋಡು, ಉದ್ಯಮಿ ಜಯರಾಮ್ ರೈ ಅಡ್ಯೆತ್ತಿಮಾರು, ಕೃಷಿಕ ಧನರಾಜ್ ಅಲೇಕಿ, ಕುಬೇರ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಮಾಲಕ ರಾಮಚಂದ್ರ, ದಿಯಾ ಸಿಸ್ಟಮ್ಸ್‌ನ ಧನಂಜಯ, ಶ್ರೀ ದುರ್ಗಾ ಇಂಜಿನಿಯರಿಂಗ್ ವಕ್ಸ್೯ ಮಾಲಕ ಮನಮೋಹನರವರನ್ನು ಪಿಡಿಜಿ ಡಾ.ರವಿ ಅಪ್ಪಾಜಿರವರು ರೋಟರಿ ಪಿನ್ ತೊಡಿಸುವ ಮೂಲಕ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.


ಟಿ.ಆರ್.ಎಫ್ ದೇಣಿಗೆ:
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ಟಿ.ಆರ್‌ಎಫ್ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿಗೆ ಭಾಜನರಾದ ಡಾ.ಸೂರ್ಯನಾರಾಯಣ, ಪ್ರಮೀಳಾ ರಾವ್, ಕೆ.ವಿಶ್ವಾಸ್ ಶೆಣೈ, ಪುರಂದರ ರೈ, ಬೂಡಿಯಾರು ರಾಧಾಕೃಷ್ಣ ರೈ, ಜಯಂತ್ ನಡುಬೈಲು, ಸಚ್ಚಿದಾನಂದ, ಮುರಳೀಶ್ಯಾಂ, ಡಾ.ಶ್ಯಾಮ್ ಪ್ರಸಾದ್, ಸುರೇಶ್ ಕೆ.ಯುರವರನ್ನು ಅಭಿನಂದಿಸಲಾಯಿತು.


ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಪ್ರತಿನಿಧಿಗಳಾಗಿ ಸೇವೆಗೈಯಲಿರುವ ಪ್ರಮೀಳಾ ರಾವ್, ಡಾ.ಸೂರ್ಯನಾರಾಯಣ, ದಿವಾಕರ ನಿಡ್ವಣ್ಣಾಯ, ಪುರಂದರ ರೈ, ಮುರಳೀಶ್ಯಾಂ, ಕೃಷ್ಣನಾರಾಯಣ ಮುಳಿಯ, ಶರತ್ ಕುಮಾರ್ ರೈ, ವಿಶ್ವಾಸ್ ಶೆಣೈ ರವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.


ಆನೆಟ್‌ಗಳಿಗೆ ಗೌರವ:
ಕ್ಲಬ್ ಸದಸ್ಯರ ಮಕ್ಕಳಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈಯ್ದಿರುವ ಪ್ರಕಾಶ್ ರೈ ಮನವಳಿಕೆರವರ ಪುತ್ರ ಪ್ರಣೀತ್ ರೈ ಎಂ(ಪಿಯುಸಿ), ಸಚ್ಚಿದಾನಂದರವರ ಪುತ್ರ ಲವಣ್ ಎಸ್(ಎಸೆಸ್ಸೆಲ್ಸಿ), ಶಶಿಕಿರಣ್ ರೈರವರ ಪುತ್ರ ಸಮೃದ್ದ್ ಎಸ್.ರೈ(ಪಿಯುಸಿ), ಜಯಂತ್ ನಡುಬೈಲುರವರ ಪುತ್ರ ಅಕ್ಷಯ್ ನಡುಬೈಲು(ಎಂಬಿಬಿಎಸ್), ಕೆ.ವಿಶ್ವಾಸ್ ಶೆಣೈರವರ ಪುತ್ರಿ ತನ್ವಿ ಶೆಣೈ(ಎಸೆಸ್ಸೆಲ್ಸಿ), ಡಾ.ರವಿಪ್ರಕಾಶ್‌ರವರ ಪುತ್ರ ಭಾರವಿ ಕೆ.ಭಟ್(ಕ್ಲಾಸಿಕಲ್ ಮ್ಯೂಸಿಕ್)ರವರನ್ನು ಗೌರವಿಸಲಾಯಿತು.


ವಿದ್ಯಾರ್ಥಿ ವೇತನ ವಿತರಣೆ:
ಯೂತ್ ಸರ್ವಿಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದಿ.ಮಾರಪ್ಪ ಶೆಟ್ಟಿ ಧತ್ತಿನಿಧಿ ವಿದ್ಯಾರ್ಥಿವೇತನ, ಮೈಸೂರು ಪಿ.ಚಿತ್ತರಂಜನ್ ಶೆಟ್ಟಿರವರ ಪ್ರಾಯೋಜಕತ್ವದಲ್ಲಿ ರೂ.4 ಸಾವಿರರಂತೆ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ವಿದ್ಯಾರ್ಥಿಗಳಾದ ಪ್ರದೀಪ್, ದಿವೀಶ್, ತನುಶ್ರೀ, ಜಯಶ್ರೀ, ಸಿಂಚನ, ರೈ. ರೂ.4 ಸಾವಿರ ಕೆನರಾ ಪಿಯು ಕಾಲೇಜಿನ ಪ್ರಾಚಿ ಶೆಣೈ, ದಿ.ಕುಡ್ಗಿ ಸುಧಾಕರ್ ಶೆಣೈ ವಿದ್ಯಾರ್ಥಿವೇತನ ರೂ.4 ಸಾವಿರರಂತೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೇಘ, ಸಂತ ಫಿಲೋಮಿನಾ ಕಾಲೇಜಿನ ಸ್ವಾತಿ, ಎಸ್.ಸಾನ್ವಿ, ಗಾನ್ಯಶ್ರೀ, ದೇವಿಕಾ, ರೂ.೫ ಸಾವಿರ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸ್ವಸ್ತಿಕಾ, ಕುಡ್ಗಿ ರತ್ನಾಕರ್ ಶೆಣೈ ವಿದ್ಯಾರ್ಥಿವೇತನ ರೂ.4 ಸಾವಿರದಂತೆ ವಿದ್ಯಾರ್ಥಿಗಳಾದ ಪ್ರಣತಿ, ಧನ್ಯ, ಪ್ರೀತಂ, ಶ್ರಾವ್ಯ, ಶ್ರೇಯಸ್, ಬೊಳ್ವಾರು ವಿನಾಯಕ ಟ್ರೇಡರ್ಸ್ ಮಾಲಕ ನವೀನ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಚಾರ್ವಿರವರಿಗೆ ರೂ.9500 ಸ್ಕಾಲರ್ಶಿಪ್ ಅನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.


ಪದ ಪ್ರದಾನ:
ನೂತನ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿ ನವೀನ್ ರೈ ಪಂಜಳ, ಕೋಶಾಧಿಕಾರಿ ಹಾಗೂ ಜೊತೆ ಕಾರ್ಯದರ್ಶಿ ಜಯಂತ್ ಬಾಯಾರು, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ರವಿಕುಮಾರ್ ರೈ, ಉಪಾಧ್ಯಕ್ಷ ವಿಜಯ ಬಿ.ಎಸ್, ಸಾರ್ಜಂಟ್ ಎಟ್ ಆಮ್ಸ್೯ ಶಶಿಕಿರಣ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಕೆ.ವಿಶ್ವಾಸ್ ಶೆಣೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಅಬ್ಬಾಸ್ ಕೆ.ಮುರ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಜಯಂತ್ ನಡುಬೈಲು, ಯೂತ್ ಸರ್ವಿಸ್ ನಿರ್ದೇಶಕ ಮುರಳೀಶ್ಯಾಂ ಎಂ, ಚೇರ್ಮನ್ ಗಳಾದ ನವೀನ್ ಶೆಟ್ಟಿ(ಮೆಂಬರ್ ಶಿಪ್), ಎಂ.ಪುರಂದರ ರೈ(ಟಿ.ಆರ್.ಎಫ್), ಪ್ರಕಾಶ್ ರೈ ಮನವಳಿಕೆ(ಪಬ್ಲಿಕ್ ಇಮೇಜ್), ನಿಶಾಂತ್ ರೈ(ಜಿಲ್ಲಾ ಪ್ರಾಜೆಕ್ಟ್), ಶರತ್ ಕುಮಾರ್ ರೈ(ಸಿ.ಎಲ್.ಸಿ.ಸಿ), ಡಾ.ಶ್ಯಾಮ್ ಪ್ರಸಾದ್(ಬುಲೆಟಿನ್ ಎಡಿಟರ್), ಆಂಜನಾ ಪೈ(ವೆಬ್/ಐಟಿ), ವಸಂತ್ ಜಾಲಾಡಿ(ಪೋಲಿಯೊ ಪ್ಲಸ್) ನಿಕಟಪೂರ್ವ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆರವರುಗಳಿಗೆ ಪದ ಪ್ರದಾನ ಅಧಿಕಾರಿ ಡಾ.ರವಿ ಅಪ್ಪಾಜಿರವರು ಪದ ಪ್ರದಾನವನ್ನು ನೆರವೇರಿಸಿದರು.


ಕಮ್ಯೂನಿಟಿ ಸರ್ವಿಸ್ ಫಂಡಿಗೆ ರೂ.10 ಸಾವಿರ ದೇಣಿಗೆ ನೀಡಿದ ಸ್ನೇಹ ಸಿಲ್ಕ್ ರೆಡಿಮೇಡ್ಸ್ ಮಾಲಕ ಸತತ ಕುಮಾರ್ ರವರನ್ನು ಅಭಿನಂದಿಸಲಾಯಿತು. ಆನೆಟ್ ತನ್ವಿ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆರವರ ಪತ್ನಿ ಶ್ರೀಮತಿ ವಿಜಯ ಸರಸ್ವತಿ, 2023-24ರ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನೂತನ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರ ಪತ್ನಿ ಅರ್ಪಿತಾ ಶಶಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ವಸಂತ್ ಜಾಲಾಡಿ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ಪುರಂದರ ರೈರವರು ಪದ ಪ್ರದಾನ ಅಧಿಕಾರಿರವರ ಪರಿಚಯ ಮಾಡಿದರು. ಕೆ.ವಿಶ್ವಾಸ್ ಶೆಣೈ ಹಾಗೂ ಶರತ್ ಕುಮಾರ್ ರೈರವರು ಕಾರ್ಯಕ್ರಮ ನಿರೂಪಿಸಿದರು.


ಪ್ರೀತಿಯಿಂದ ಹುದ್ದೆ ಸ್ವೀಕಾರ..
34ನೇ ಕ್ಲಬ್ ಅಧ್ಯಕ್ಷನಾಗಿ ಪ್ರೀತಿಯಿಂದ ಹುದ್ದೆಯನ್ನು ಸ್ವೀಕರಿಸುತ್ತಿದ್ದೇನೆ. ಕ್ಲಬ್ ಪ್ರಾಜೆಕ್ಟ್ ಅನ್ನು ಎಂದಿನಂತೆ ಸದಸ್ಯರೊಂದಿಗಿನ ಉತ್ತಮ ಬಾಂಧವ್ಯದೊಂದಿಗೆ ನಿಷ್ಠೆಯಿಂದ ಮಾಡೋಣ. ಸಾಮಾಜಿಕ ಕಳಕಳಿಯಿಂದ, ದಾನಿಗಳ ನೆರವಿನ ಹಸ್ತದಿಂದ ಹಾಗೂ ಸದಸ್ಯರ ಪ್ರೀತಿ, ವಿಶ್ವಾಸದಿಂದ ಕ್ಲಬ್ ಅನ್ನು ಉತ್ತುಂಗಕ್ಕೇರಿಸೋಣ.
-ಶಶಿಧರ್ ಕಿನ್ನಿಮಜಲು, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಈಸ್ಟ್

ಸೇವಾ ಕೊಡುಗೆ:
ಕಮ್ಯೂನಿಟಿ ಸರ್ವಿಸ್ ವತಿಯಿಂದ ವರ್ಷಂಪ್ರತಿ ಏಳ್ಮುಡಿ ದೇವಾ ಟ್ರೇಡರ್ಸ್ ಮಾಲಕ ಟಿ.ವಿ ರವೀಂದ್ರನ್‌ರವರ ಪ್ರಾಯೋಜಕತ್ವದಲ್ಲಿ ಮುಂಡೂರು ಗ್ರಾಮದ ಮಲ್ಲಿಕಾ, ಆರ್ಯಾಪು ಇಲ್ಲಿನ ನಳಿನಾಕ್ಷಿ ಎಂಬವರಿಗೆ ಹೊಲಿಗೆ ಯಂತ್ರ, ತಿಂಗಳಾಡಿ ಅಂಗನವಾಡಿ ಕೇಂದ್ರಕ್ಕೆ ೧೦೦೦ಲೀ. ನೀರಿನ ಟ್ಯಾಂಕ್(ಪ್ರಾಯೋಜಕತ್ವ:ರೋಶನ್ ರೈ ಬನ್ನೂರು), ಕುರಿಯ ಅಂಗನವಾಡಿ ಕೇಂದ್ರಕ್ಕೆ 599ಲೀ. ವಾಟರ್ ಟ್ಯಾಂಕ್(ಪ್ರಾಯೋಜಕತ್ವ:ಜಯಂತ್ ಬಾಯಾರು), ಪುತ್ತೂರಿನ ರುದ್ರಭೂಮಿಗೆ ದಿ.ಕುಡ್ಗಿ ಸುಧಾಕರ್ ಶೆಣೈ ಸ್ಮರಣಾರ್ಥ ಅವರ ಪತ್ನಿ ಸುಧಾ ಶೆಣೈರವರು ರೂ.12 ಸಾವಿರದ ಸೌರ ವಿದ್ಯುತ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಸನ್ಮಾನ..
ನೆಟ್ಟಣಿಗೆ ಮುಡ್ನೂರು ನಿವಾಸಿ, 1993ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮಡಿಕೇರಿ ಜಿಲ್ಲೆಯಲ್ಲಿ ಆಯ್ಕೆಯಾಗಿ ಇಲಾಖೆ ತರಬೇತಿ ಮುಗಿಸಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಮಡಿಕೇರಿಯ ಸಿದ್ಧಾಪುರದಲ್ಲಿ ಆರಂಭಿಸಿ 22 ವರ್ಷ ಕೊಡಗು ಜಿಲ್ಲೆಯ ಹಲವಾರು ಪೊಲೀಸ್ ಸ್ಟೇಷನಿನಲ್ಲಿ ಕರ್ತವ್ಯ ನಿರ್ವಹಿಸಿ ಹೆಡ್ ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿ 2015ರಂದು ದ.ಕ ಜಿಲ್ಲೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಂಡು ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯವನ್ನು ಮುಂದುವರೆಸಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್‌ರವರ ಸೂಚನೆ ಮತ್ತು ಸಹಾಯದಿಂದ ಸುಮಾರು 72 ಲಾಂಗ್ ಪೆಂಡಿಂಗ್ ಕೇಸಿನ ಆರೋಪಿಗಳನ್ನು ಹಲವಾರು ಜಿಲ್ಲೆ, ರಾಜ್ಯಗಳಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿದ ಇವರ ಕರ್ತವ್ಯವನ್ನು ಗುರುತಿಸಿ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ ಕೆ.ಪರಮೇಶ್ವರ ಗೌಡರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಅತ್ತ್ಯುತ್ತಮವಾಗಿ ಕ್ಲಬ್ ಮುನ್ನಡೆಸಿದ ಕ್ಲಬ್ ನಿರ್ಗಮಿತ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ, ಕಾರ್ಯದರ್ಶಿ ವಸಂತ್ ಜಾಲಾಡಿರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here