ಪಾಪೆಮಜಲು ಸರಕಾರಿ ಹಿ.ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಮೇಬಲ್ ಡಿ ಸೋಜಾ ರವರ ಬೀಳ್ಕೊಡುಗೆ ಸಮಾರಂಭ

0

ಅರಿಯಡ್ಕ : ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಸಹಯೋಗದೊಂದಿಗೆ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಮೇಬಲ್ ಡಿ ಸೋಜ ರವರಿಗೆ ಜು.5 ರಂದು ಬೀಳ್ಕೊಡುಗೆ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಮಕ್ಕಳೊಂದಿಗೆ ಮಕ್ಕಳಾಗಿ ಇದ್ದವರು: ಸಂತೋಷ್ ಮಣಿಯಾಣಿ ಕುತ್ಯಾಡಿ
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಗೌರವಯುತವಾಗಿ ಬೀಲ್ಕೊಡುತ್ತಿರುವ ಮೇಬಲ್ ಡಿಸೋಜ ರವರು ಮಕ್ಕಳೊಂದಿಗೆ ಮಕ್ಕಳಾಗಿ ಇದ್ದು, ವಿದ್ಯಾಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿದವರು. ಇವರ ಮುಂದಿನ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.


ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ ;ತೆರೇಜ್ ಎಂ ಸಿಕ್ವೇರಾ
ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ತೆರೇಜ್ ಎಂ ಸಿಕ್ವೇರಾ ಮಾತನಾಡಿ, ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ. ನಾವು ಮಾಡಿದ ಸಾಧನೆ ಶಾಶ್ವತ. ಈ ನಿಟ್ಟಿನಲ್ಲಿ ಮೇಬಲ್ ಡಿಸೋಜರವರು ಈ ವಿದ್ಯಾ ಸಂಸ್ಥೆಯಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಾದ ಸ್ಕೌಟ್ ಆಂಡ್ ಗೈಡ್ಸ್ , ಕ್ರೀಡೆ, ಸಾಂಸ್ಕೃತಿ‌ಕ ಚಟುವಟಿಕೆಗಳು ಹಾಗೂ ಸಂಸ್ಥೆಯ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಜೋಡಿಸಿಕೊಂಡಿದ್ದರು. ಇವರ ಸೇವೆ ಶ್ಲಾಘನೀಯವಾಗಿದೆ. ಎಂದು ಶುಭ ಹಾರೈಸಿದರು.


ಶಿಕ್ಷಣ ಕ್ಷೇತ್ರದ ಸಾಧಕಿ: ಮೋನಪ್ಪ ಬಿ ಪೂಜಾರಿ
ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯ ಮೋನಪ್ಪ ಬಿ ಪೂಜಾರಿ ಮಾತನಾಡಿ, ಮೇಬಲ್ ಡಿ,ಸೋಜ ರವರು ಸ್ಕೌಟ್ ನಲ್ಲಿ ಅನನ್ಯ ಸಾಧನೆ ಮಾಡಿದವರು. ಸಂಸ್ಥೆಯಲ್ಲಿ ವಿವಿಧ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದವರು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.


ಸಮಾಜಮುಖಿ ಶಿಕ್ಷಕಿ: ಇಕ್ಬಾಲ್ ಹುಸೇನ್ ಕೌಡಿಚ್ಚಾರು
ಸರಕಾರಿ ಪ್ರೌಢ ಶಾಲೆ ಪಾಪೆ ಮಜಲು ಇದರ ಕಾರ್ಯಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಮೇಬಲ್ ಡಿಸೋಜಾ. ಇವರು ಕ್ರೀಡಾ ಪ್ರೇಮಿ, ಅದಲ್ಲದೇ ಮಕ್ಕಳ ಹೆತ್ತವರ ಕಷ್ಟಗಳಿಗೆ ಸದಾ ಸ್ಪಂದಿಸುವ ಶಿಕ್ಷಕಿಯಾಗಿದ್ದರು. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.


ವಿದ್ಯಾ ಸಂಸ್ಥೆಯ‌ ಅಭಿವೃದ್ಧಿಯಲ್ಲಿ ಕೈ ಜೋಡಿಸಿದವರು:ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು
ಎಸ್ ಡಿ ಎಂ ಸಿ ಅಧ್ಯಕ್ಷ ಅಪ್ಪಯ್ಯನಾಯ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು,ಅದರ ಯಶಸ್ಸಿಗೆ ಶ್ರಮಿಸುತ್ತಿರುವ ಮೇಬಲ್ ಡಿ ಸೋಜ ರವರು ನಿವೃತ್ತಿ ನಮಗೆಲ್ಲರಿಗೂ ಬೇಸರ ತಂದಿದೆ.ಅವರಿಗೆ ದೇವರು ಆಯುರಾರೋಗ್ಯ ಭಾಗ್ಯ ನೀಡಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ‌ ಕೃಷಿಕ ಮೇಬಲ್ ಡಿ ಸೋಜ ರವರ ಪತಿ ಜೇಕಬ್ ಡಿ, ಕುನ್ಹ, ದಾನಿ ರಮೇಶ್ ಪರ್ಪುಂಜ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನಯನ ಬಳ್ಳಿಕಾನ ಉಪಸ್ಥಿತರಿದ್ದರು.


ಹಿತೈಷಿಗಳ ಶುಭ ಹಾರೈಕೆ
ಸಂಸ್ಥೆಯ ಪರವಾಗಿ ಶಿಕ್ಷಕಿ ರಜನಿ ಕೆ.ಆರ್,ಮೇಬಲ್ ಡಿಸೋಜಾ ರವರ ಪುತ್ರಿ ಜೋಯಿಲಿನ್ ಮಂಗಳೂರು, ಸಂಸ್ಥೆಯ ವಿದ್ಯಾರ್ಥಿಗಳು,ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಧನಂಜಯ ನಾಯ್ಕ, ಮತ್ತು ದಿನೇಶ್ ಪೂಜಾರಿ ಮರತ್ತಮೂಲೆ , ಪೋಷಕ ಪರವಾಗಿ ಲೀಲಾವತಿ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಘಟಕದ ಅಧ್ಯಕ್ಷ ನಾಗೇಶ್ ಪಾಟಾಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರ ಇದರ ಮುಖ್ಯೋಪಾಧ್ಯಾಯ ರಾಮಣ್ಣ ರೈ, ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.


ಸನ್ಮಾನ
ನಿವೃತ್ತ ಶಿಕ್ಷಕಿ ಮೇಬಲ್ ಡಿ ಸೋಜ ರವರಿಗೆ ವಿದ್ಯಾ ಸಂಸ್ಥೆಯ ವತಿಯಿಂದ ಚಿನ್ನದ ಉಂಗುರ ,ಶಾಲು, ಸ್ಮರಣಿಕೆ,ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.ನಂತರ ತಾಲೂಕು ಸ್ಕೌಟ್ ಗೈಡ್ ವತಿಯಿಂದ ಸುನೀತಾ ಪುತ್ತೂರು, ವಿದ್ಯಾ ಆರ್ ಗೌರಿ ಪುತ್ತೂರು, ಶ್ರೀಧರ್ ರೈ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷೆ ವೇದಾವತಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಪೂಜಾರಿ ಮರತ್ತಮೂಲೆ ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಘಟಕ, ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇದರ ಉಪ ಪ್ರಾಂಶುಪಾಲ ವಸಂತಮೂಲ್ಯ, ಶಿಕ್ಷಕಿ ರೆನಿಟಾ ಸುಷ್ಮಾ ಡಿ ಸೋಜ, ಮತ್ತು ಯುಜಿನಾ ಡಿ, ಸೋಜ,ಕ್ಷೇತ್ರ ಸಮನ್ವಯಾಧಿಕಾರಿ, ನವೀನ್ ವೇಗಸ್, ನಿವೃತ್ತ ವಲಯಅರಣ್ಯಾಧಿಕಾರಿ ಸುಬ್ರಹ್ಮಣ್ಯ ಗೌಡ, ಮೇಬಲ್ ಡಿಸೋಜ ರವರ ಕುಟುಂಬಸ್ಥರು , ಸಂಸ್ಥೆಯ ಪೋಷಕರು, ವಿವಿಧ ಶಾಲೆಗಳ ಮುಖ್ಯಸ್ಥರು ಸಹಿತ ಹತ್ತಾರು ಜನರು ಮೇಬಲ್ ಡಿ ಸೋಜ ರವರನ್ನು ಶಾಲು ಹೂಗುಚ್ಚ ಸ್ಮರಣಿಕೆ ನೀಡಿ ಗೌರವಿಸಿದರು.


ಕೊಡುಗೆ
ನಿವೃತ್ತ ಶಿಕ್ಷಕಿ ಮೇಬಲ್ ಡಿಸೋಜಾ ಇವರು ಶಾಲೆಗೆ ಕಲರ್ ಪ್ರಿಂಟರ್, ವಿದ್ಯಾರ್ಥಿಗಳಿಗೆ ಸ್ಟೀಲಿನ ಲೋಟ, ಶಿಕ್ಷಕರಿಗೆ ,ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಉದ್ಯಮಿ ರಮೇಶ್ ಪರ್ಪುಂಜ ಶಾಲೆಯ ಎಲ್.ಕೆ .ಜಿ ,ಯು.ಕೆ.ಜಿ ವಿದ್ಯಾರ್ಥಿಗಳಿಗೆ 22 ಚಯರ್ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ, ವಿನುತಾ ಬಳ್ಳಿಕಾನ, ಅನಿತಾ ಆಚಾರಿ ಮೂಲೆ ಮತ್ತು ಪುಷ್ಪಲತಾ ಮರತ್ತಮೂಲೆ,ಎಸ್.ಡಿ.ಎಂ ಸಿ ಸದಸ್ಯರಾದ ದಯಾನಂದ ಗೌಡ ಆಕಾಯಿ, ಹರೀಶ್ ನಾಯ್ಕ ಪಾದಲಾಡಿ, ದಿನೇಶ್ ನಾಯ್ಕಬಪ್ಪಪುಂಡೇಲು, ರಾಜೇಶ್ ಗೌಡ ಕನ್ನಯ, ಮಾಲತಿ ಪಾಪೆಮಜಲು, ಅನಿತಾ ಬಳ್ಳಿಕಾನ, ಕವಿತಾ ಕನ್ನಯ, ಮಮತಾ ಹೊಸಗದ್ದೆ, ವಿಜಯಲಕ್ಷ್ಮಿ, ಮತ್ತು ಸುಮಯ್ಯ ಹೊಸಗದ್ದೆ, ಅಕ್ಷರ ದಾಸೋಹ ಸಿಬ್ಬಂದಿ ಗಳು, ಪೋಷಕರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ ಪ್ರಾಸ್ತವಿಕ ಮಾತನಾಡಿ, ಶುಭ ಹಾರೈಸಿದರು.ಶಿಕ್ಷಕಿ ಪುಷ್ಪಾವತಿ ಎಸ್ ಸ್ವಾಗತಿಸಿ, ಶಿಕ್ಷಕಿ ಸ್ವಾತಿ ಕೆ.ಜೆ ವಂದಿಸಿದರು. ಶಿಕ್ಷಕಿ ಜಯಲತಾ ಬಿ.ಕೆ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಕಿರಣ್ ರಾಜ್ ಎಸ್ ಕಾರ್ಯಕ್ರಮ ನಿರೂಪಿಸಿದರು.

ನನಗೆ ಕರ್ತವ್ಯ ಮಾಡಲು ಉತ್ತಮ ವಿದ್ಯಾಸಂಸ್ಥೆಯನ್ನು ದೇವರು ಕರುಣಿಸಿದ್ದಾನೆ. ಈ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪೋಷಕರು ತುಂಬಾ ಸಹಕಾರವನ್ನು ನೀಡಿದ್ದಾರೆ. ಅವರಿಗೆ ನಾನು ಆಭಾರಿ. ಸಂಸ್ಥೆಯ ವಿದ್ಯಾರ್ಥಿಗಳು ಸದಾ ನನ್ನ ನೆನಪಿನಲ್ಲಿರುತ್ತಾರೆ. ಮೊಬೈಲನ್ನು ಬಳಸದೆ, ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇನ್ನು ಮುಂದೆ ಕೂಡ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವೆ. ಸರ್ವರಿಗೂ ನನ್ನ ಧನ್ಯವಾದಗಳು.
ಮೇಬಲ್ ಡಿ ಸೋಜ
ನಿವೃತ್ತ ಶಿಕ್ಷಕಿ

LEAVE A REPLY

Please enter your comment!
Please enter your name here