ಅಧ್ಯಕ್ಷ: ನೋಣಯ್ಯ ಪೂಜಾರಿ ಅಂಬರ್ಜೆ
ಉಪಾಧ್ಯಕ್ಷ: ಜನಾರ್ದನ ಬಾಣಜಾಲು
ಕಾರ್ಯದರ್ಶಿ: ಲಿತಿನ್ಕುಮಾರ್
ಕೋಶಾಧಿಕಾರಿ: ಮಹೇಶ ಬರೆಗುಡ್ಡೆ
ಜೊತೆ ಕಾರ್ಯದರ್ಶಿ: ಶಿವರಾಜ್
ಮಹಿಳಾ ಘಟಕದ ಅಧ್ಯಕ್ಷೆ: ದೀಕ್ಷಾ ಸಾಲಿಯಾನ್, ಕಾರ್ಯದರ್ಶಿ: ಪದ್ಮಾವತಿ
ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ನೆಲ್ಯಾಡಿ ಇದರ ನೂತನ ಅಧ್ಯಕ್ಷರಾಗಿ ನೋಣಯ್ಯ ಪೂಜಾರಿ ಅಂಬರ್ಜೆ, ಉಪಾಧ್ಯಕ್ಷರಾಗಿ ಜನಾರ್ದನ ಬಾಣಜಾಲು, ಕಾರ್ಯದರ್ಶಿಯಾಗಿ ಲಿತಿನ್ ಕುಮಾರ್, ಕೋಶಾಧಿಕಾರಿಯಾಗಿ ಮಹೇಶ ಬರೆಗುಡ್ಡೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶಿವರಾಜ್ ಆಯ್ಕೆಯಾದರು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ದೀಕ್ಷಾ ಸಾಲಿಯಾನ್ ಹಾಗೂ ಕಾರ್ಯದರ್ಶಿಯಾಗಿ ಪದ್ಮಾವತಿ ಪುನರಾಯ್ಕೆಗೊಂಡರು.

ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಹಾಗೂ ಸಮಿತಿಯ ಮಾಸಿಕ ಸಭೆ ಇತ್ತೀಚೆಗೆ ನೆಲ್ಯಾಡಿಯ ಹೋಟೆಲ್ ಬಿರ್ವ ಇದರ ಸಭಾಂಗಣದಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷ ಮೋಹನ್ ಕುಮಾರ್ ದೋಂತಿಲ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ನೆಲ್ಯಾಡಿ ವಲಯ ಸಂಚಾಲಕ ಡಾ. ಸದಾನಂದ ಕುಂದರ್ ಅವರು ನೂತನ ಸಮಿತಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

2024-25ನೇ ಸಾಲಿನ ಕಾರ್ಯದರ್ಶಿ ಜನಾರ್ದನ ಬಾಣಜಾಲು ಗತ ಸಭೆಯ ವರದಿ ವಾಚಿಸಿದರು. ಅಧ್ಯಕ್ಷ ಮೋಹನ್ ಕುಮಾರ್ ಸ್ವಾಗತಿಸಿ ಲೆಕ್ಕ ಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಲಿತಿನ್ ಕುಮಾರ್ ವಂದಿಸಿದರು. ಸಭೆಯಲ್ಲಿ ಚಂದ್ರಶೇಖರ ಬಾಣಜಾಲು, ಸುಂದರ ಬಿ., ವೀರಪ್ಪ ಅಂಬರ್ಜೆ, ತುಳಸೀಧರನ್, ಮಹಿಳಾ ಘಟಕದ ಜೊತೆ ಕಾರ್ಯದರ್ಶಿ ಅನಿತಾಸುರೇಶ್, ಕೋಶಾಧಿಕಾರಿ ಉಷಾವಿಜಯ್, ನಿಶಾನಿ ಮತ್ತಿತರರು ಉಪಸ್ಥಿತರಿದ್ದರು.