ವಿಟ್ಲ: ಸಹಪಾಠಿ ಜೊತೆ ಮಾತನಾಡುತ್ತಿದ್ದ ಅಪ್ರಾಪ್ತನಿಗೆ ಬೆದರಿಕೆ-ಆರೋಪಿ ಸೆರೆ

0

ವಿಟ್ಲ: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಶಾಲಾ ಸಹಪಾಠಿಯೊಬ್ಬಳೊಂದಿಗೆ ಮಾತನಾಡುತ್ತಿದ್ದ ಅಪ್ರಾಪ್ತನಿಗೆ, ಹಿಂದೂ ಹುಡುಗಿಯೊಂದಿಗೆ ಮಾತನಾಡುತ್ತಿರುವ ಕುರಿತು ತಕರಾರು ತೆಗೆದು ಜೀವಬೆದರಿಕೆ ಒಡ್ಡಿರುವ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂತ್ರಸ್ತ ಬಾಲಕನ ಸಹೋದರ ನೀಡಿದ ದೂರಿನ ಮೇರೆಗೆ ಕಲಂ: 126(2), 352, 351(3),196(1)(ಅ) BNS 2023ರಂತೆ ವಿಟ್ಲ ಪೊಲೀಸರು ಪ್ರಕರಣ (ಅ.ಕ್ರ.:83/2025) ದಾಖಲಿಸಿಕೊಂಡು ಆರೋಪಿತ ಮಂಜೇಶ್ವರ ಎನ್ಮಕಜೆ ನಿವಾಸಿ ಪದ್ಮರಾಜ್ ಎಂಬಾತನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here