ಜು.11ರಂದು ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

265 ಕೋಟಿ ರೂ.ಒಟ್ಟು ವ್ಯವಹಾರ ರೂ. 1.36 ಕೋಟಿ ಲಾಭ ಅಡಿಟ್‌ನಲ್ಲಿ “ಎ” ವರ್ಗೀಕರಣ

ಕಡಬ: 105ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನದಿಂದ ನಡೆಯುತ್ತಿರುವ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದೀಗ ಸುಂದರವಾದ ಹೊಸ ಕಟ್ಟಡ ಸಮೃದ್ಧಿ ಸಹಕಾರ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2024-25ನೇ ಸಾಲಿನಲ್ಲಿ ಸಂಘವು 265.20.60,041 ರೂ. ವ್ಯವಹಾರ ನಡೆಸಿ ರೂ.1,36,62,978 ರೂ ಲಾಭ ಗಳಿಸಿದೆ, ಸಂಘದ ವಾರ್ಷಿಕ ಮಹಾಸಭೆಯು ಜು.11ರಂದು ಸಂಘದ ಸಮೃದ್ಧಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ ಅವರು ತಿಳಿಸಿದ್ದಾರೆ.


ಅವರು ಸಂಘದ ಕಛೇರಿಯಲ್ಲಿ ಮಾತನಾಡಿ, ಸಂಘದ ಸದಸ್ಯರ ಆರ್ಥಿಕ ಅವಶ್ಯತೆಗಳನ್ನು ಪೂರೈಸುತ್ತಾ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ. ವರದಿ ವರ್ಷದಲ್ಲಿ ಸಂಘವು ರೂ.15.03 ಕೋಟಿ ಠೇವಣಿ ಹೊಂದಿದ್ದು, ರೂ.5.86 ಕೋಟಿ ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ 49.69 ಕೋಟಿ ರೂ. ಸಾಲ ವಿತರಿಸಿದ್ದು, ರೂ.47.02 ಕೋಟಿ ಸಾಲ ಹೊರ ಬಾಕಿ ಇದೆ, ವರ್ಷಾಂತ್ಯಕ್ಕೆ ಶೇ.95.60 ಸಾಲ ಮರುಪಾವತಿಯಾಗಿರುತ್ತದೆ. ವರದಿ ಸಾಲಿನಲ್ಲಿ ದಾಖಲೆಯ ರೂ.1.36 ಕೋಟಿ ಲಾಭ ಗಳಿಸಿ ಸಂಘ ಉತ್ತಮ ಸಾಧನೆ ಮಾಡಿದೆ. ಕೇವಲ ಎರಡು ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿತ್ತಾ ಕಳೆದ 5 ವರ್ಷಗಳಿಂದ ಒಂದು ಕೋಟಿಗಿಂತಲೂ ಮಿಕ್ಕಿ ಲಾಭಗಳಿಸಿರುವುದು ಸಂಘದ ಅದ್ಬುತ ಸಾಧನೆಯಾಗಿದೆ. ಹೊಸ ಕಟ್ಟಡದಲ್ಲಿ ಸಭಾಭವನಗಳನ್ನು ನಿರ್ಮಿಸಲಾಗಿದ್ದು ಮಿತದರದಲ್ಲಿ ಕಾರ್ಯಕ್ರಮ ನಡೆಸಲು ನೀಡಲಾಗುತ್ತಿದೆ. ಕೆಸಿಸಿ ಸಾಲ ಪಡೆದ 800 ಸದಸ್ಯರನ್ನು ಅಪಘಾತ ವಿಮಾ ಯೋಜನೆಗೆ ನೊಂದಾಯಿಸಲಾಗಿದೆ.

483 ರೈತ ಕುಟುಂಬದ 1771 ಮಂದಿಯನ್ನು ಯಶಸ್ವಿನಿ ವಿಮಾ ಯೋಜನೆಯಲ್ಲಿ ನೊಂದಾಯಿಸಲಾಗಿದೆ. ಸಂಘವು ಸತತ ವರ್ಷಗಳಿಂದ ಅಡಿಟ್ ನಲ್ಲಿ ಎ ವರ್ಗೀಕರಣ ಪಡೆಯುತ್ತಾ ಬಂದಿದ್ದು ಈ ವರ್ಷವು ಎ ವರ್ಗೀಕರಣ ಪಡೆದಿದೆ ಎಂದು ಹೇಳಿದ ಅವರು ಸದಸ್ಯರು ಮಹಾಸಭೆಗೆ ಆಗಮಿಸಿ ಸಂಘದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಿದಾನಂದ ಕೆ, ನಿರ್ದೇಶಕರಾದ ಜಯಚಂದ್ರ ರೈ ಕೆ, ಶಶಾಂಕ ಗೋಖಲೆ ಎಂ., ಶಿವಪ್ರಸಾದ್ ಪಿ.ವಿ., ಶ್ರೀಧರ ಎಸ್.ಎನ್., ಶಿವಪ್ರಸಾದ್ ರೈ,, ಅಚ್ಯುತ ದೇರಾಜೆ, ಪಕೀರ, ಯೋಗೇಂದ್ರಕುಮಾರ್ ಬಿ.ಎಸ್., ಲೀಲಾವತಿ ಕೆ., ಶಕಿಲ ಸಂಘದ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಸೋಮಸುಂದರ ಶೆಟ್ಟಿ ಎಂ.ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here