ಪುತ್ತೂರು : ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಬೂತ್ ಸಮಿತಿ-66 ಮೊಗರು, ಸವಣೂರು ಇದರ ವತಿಯಿಂದ ಶ್ರೀ ಗುರುಪೂರ್ಣಿಮಾ ಉತ್ಸವದ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೋಯ್ಯುವಲ್ಲಿ ಶ್ರಮಿಸಿದ, ನಿವೃತ್ತ ಶಿಕ್ಷಕ ರಾಮ ಭಟ್ ಕುಕ್ಕುಜೆ ಇವರಿಗೆ ಗುರುವಂದನಾ ಕಾರ್ಯಕ್ರಮ ಅವರ ಮನೆಯಲ್ಲಿ ನಡೆಸಲಾಯಿತು. ಗುರುಗಳಿಗೆ ಶಾಲು ಸ್ಮರಣಿಕೆ ಹಾರ ಫಲವಸ್ತುಗಳನ್ನು ನೀಡಿ ಗೌರವಿಸಲಾಯಿತು.
ಗುರುವಂದನಾ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ದಿನೇಶ್ ಮೆದು, ಸುಳ್ಯ ಮಂಡಲ ಎಸ್. ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಬಿಜೆಪಿ ಸುಳ್ಯ ಮಂಡಲ ಸಮಿತಿಯ ಸದಸ್ಯ ತಾರಾನಾಥ ಕಾಯರ್ಗ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ ನೆರವೇರಿಸಿದರು.
ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ ಇಡ್ಯಾಡಿ, ಬೂತ್ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ, ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಕುಕ್ಕುಜೆ, ಮೊಗರು ಬೂತ್ ನ ಬಿ.ಯಲ್ 2 ಪ್ರಮುಖರಾದ ಮಹಾಬಲ ಪೆರಿಯಡ್ಕ, ಕಾರ್ಯಕರ್ತರಾದ ಭವಿತ್ ಇಡ್ಯಾಡಿ, ದಯಾನಂದ ಮೆದು ಉಪಸ್ಥಿತರಿದ್ದರು. ಬೂತ್ ಸಮಿತಿಯ ಅಧ್ಯಕ್ಷ ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.