ಪುತ್ತೂರು: ನೆಹರು ನಗರದಲ್ಲಿರುವ ವಿವೇಕಾನಂದ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ವೇದಮೂರ್ತಿ, ಜ್ಯೋತಿಷಿ, ಶ್ರೀ ವಿಘ್ನೇಶ ಭಟ್ಟ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ; ಗುರು ಎಂದರೆ ಯಾರು?, ಯಾಕಾಗಿ ಈ ದಿನವೇ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ? ಎಂಬ ವಿಷಯಗಳ ಕುರಿತಾಗಿ ಮನೋಜ್ಞವಾಗಿ ವಿವರಿಸಿದರು. ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯನ್ನು ಇಟ್ಟುಕೊಂಡು ಆಚರಣೆಯ ಮಹತ್ವವನ್ನು, ಅದರ ಆಳವಾದ ಒಳನೋಟಗಳನ್ನು ಅತ್ಯಂತ ಹೃದ್ಯವಾಗಿ ವಿವರಿಸಿದ ರೀತಿ, ಜ್ಞಾನಪ್ರದವೂ, ಬೋಧಪ್ರಧವೂ ಆಗಿದ್ದು, ಮಕ್ಕಳೆಲ್ಲರನ್ನು ತಟ್ಟಿತು. ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನೈತಿಕ, ಮೌಲಿಕ ಹಾಗೂ ಆಧ್ಯಾತ್ಮಿಕ ಪರಿವೀಕ್ಷಕರಾದ ಮೀನಾಕ್ಷಿ ಮಾತಾಜಿಯವರು ಎಲ್ಲರ ಜೀವನದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ತರವಾದದ್ದು ಎಂದು ವಿವರಿಸಿದರು.
ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಅಭ್ಯಾಗತರ ಕಿರುಪರಿಚಯ ನೀಡಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

