ಪುತ್ತೂರು:ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ನಡೆಸಿದ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಪರಿಹಾರದ ಅಂಗವಾಗಿ 4 ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಜು.10ರಂದು ಸಂಪನ್ನಗೊಂಡಿತು.
ಕ್ಷೇತ್ರ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜು.5ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಮಹಾಗಣಪತಿ ಹೋಮ, ಸರ್ಪ ಸಂಸ್ಕಾರ ಮಂಗಳ, ಅಶ್ಲೇಷಾ ಬಲಿ, ವಟು ಆರಾಧನೆ, ನಾಗದೇವರಿಗೆ ತಂಬಿಲ, ಮಹಾಗಣಪತಿ ದೇವರ ಸನ್ನಿದಾನದಲ್ಲಿ ಸಂಹಿತಾ ಕಲಶದ ಪ್ರಯುಕ್ತ, ಋಕ್ ಸಂಹಿತಾ ಪಾರಾಯಣ ಪ್ರಾರಂಭ, ಪಂಚವಿಂಶತಿ ಕಲಶ ಪೂಜೆ, ಮಧ್ಯಾಹ್ನ ಸಂಹಿತಾ ಕಲಶಾಭಿಷೇಕ, ಮಹಾಪೂಜೆ, ಸಂಜೆ ದುರ್ಗಾಪೂಜೆ, ಸುದರ್ಶನ ಹೋಮ, ಅಘೋರ ಹೋಮ, ಸುಮಂಗಲಿ ಆರಾಧನೆ, ದಂಪತಿ ಆರಾಧನೆ, ಬಾದಾಕರ್ಷಣೆ ಉಚ್ಚಾಟನೆ ನೆರವೇರಿತು.

ಜು.9ರಂದು ಬೆಳಿಗ್ಗೆ ಗಣಪತಿ ಹೋಮ, ತಿಲಹೋಮ, ಭಗವದ್ಗೀತೆ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ದ್ವಾದಶಮೂರ್ತಿ ಆರಾಧನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶುದ್ದಿ ಕ್ರಿಯೆಗಳು, ಮಹಾಪೂಜೆ, ಜು.10ರಂದು ಬಿಂಬ ಶುದ್ಧಿ, ಕಲಶಪೂಜೆ, ವಿಶೇಷ ಪ್ರಾಯಶ್ಚಿತ್ತ ಪಂಚಗವ್ಯವಗಾಹ, ಸಾಯುಜ್ಯ ಪೂಜೆ, ಮಧ್ಯಾಹ್ನ ನವಕ ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ದೇವಸ್ಥಾನದ ಆಡಳಿತಾಧಿಕಾರಿ ದೇವಪ್ಪ ಪಿ.ಆರ್., ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಅಧ್ಯಕ್ಷ ಚಿದಾನಂದ ಬೈಲಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.