ಪುತ್ತೂರು: ಗುರು ಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮದ ಅಂಗವಾಗಿ 34ನೆಕ್ಕಿಲಾಡಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಗುರು ಆನಂದ ರೈ ರವರನ್ನು ಗೌರವಿಸಲಾಯಿತು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಶಾಂತಿ ನಗರ, ಗುರುವಂದನಾ ಅಭಿಯಾನದ ಸಹ ಸಂಚಾಲಕರಾದ ಸದಾನಂದ ಕಾರ್ ಕ್ಲಬ್, ಪಂಚಾಯತ್ ಸದಸ್ಯರಾದ ರಮೇಶ್ ಸುಭಾಷ್ ನಗರ, ಬೂತ್ ಸಂಖ್ಯೆ 35ರ ಅಧ್ಯಕ್ಷರಾದ ಗಿರೀಶ್ ಕುಂದರ್, ಸದಸ್ಯರಾದ ಸ್ವರ್ಣಲತಾ, ವಾಣಿ ಉಪಸ್ಥಿತರಿದ್ದರು.