ಪುತ್ತೂರು: ಕಟ್‌ಕನ್ವರ್ಶನ್ ಮತ್ತು 9/11 ವಿಚಾರಕ್ಕೆ ಸಂಬಂದಿಸಿದಂತೆ ಸಮಸ್ಯೆ ಹಾಗೂ ಗೊಂದಲಗಳ ಬಗ್ಗೆ ಪೌರಾಡಳಿತ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಸಲ್ಲಿಸಲಾಯಿತು.
ಪುಡಾ ಸದಸ್ಯರುಗಳಾದ ಅನ್ವರ್ ಖಾಸಿಂ ಮತ್ತು ನಿಹಾಲ್ ಪಿ ಶೆಟ್ಟಿಯವರು ಜು.10ರಂದು ಶಾಸಕ ಅಶೋಕ್ ರೈ ನಿರ್ದೇಶನದಂತೆ ಆಯುಕ್ತರಾದ ವೆಂಕಟಾಚಲಪತಿ ಆವರನ್ನು ಭೇಟಿಯಾದರು.
ಪುತ್ತೂರು ನಗರ ವ್ಯಾಪ್ತಿಯಲ್ಲಿನ ಕಟ್ ಕನ್ವರ್ಶನ್ ಸಮಸ್ಯೆಯ ಬಗ್ಗೆ ಆಯುಕ್ತರ ಗಮನಕ್ಕೆ ತಂದರು. ಪುಡಾದಲ್ಲಿ ಖಾಯಂ ಸಿಬಂದಿಗಳ ಕೊರತೆಯಿಂದ 9/11 ಖಾತಾ ನೀಡುವಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದ್ದು ಸಿಬಂದಿಗಳ ನೇಮಕಾತಿಯನ್ನು ತಕ್ಷಣ ಮಾಡುವಂತೆ ಮನವಿ ಮಾಡಿದರು.