ನಾಯಕನಾಗಿ ಅಹಮ್ಮದ್ ರಬೀಹ್,ಉಪನಾಯಕಿಯಾಗಿ ಪಾತಿಮತ್ ಹನ ಕೆ ಎನ್
ಪುತ್ತೂರು: ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲ ರಚಿಸಲಾಯಿತು. ಅತ್ಯಧಿಕ ಮತಗಳನ್ನು ಪಡೆದ ಏಳನೇ ತರಗತಿಯ ಅಹಮ್ಮದ್ ರಬೀಹ್ ಶಾಲಾ ನಾಯಕನಾಗಿ ಹಾಗೂ ಉಪನಾಯಕಿಯಾಗಿ ಪಾತಿಮತ್ ಹನ.ಕೆ.ಎನ್ ಏಳನೇ ತರಗತಿ ಆಯ್ಕೆಯಾದರು.
ಮಂತ್ರಿ ಮಂಡಲದ ವಿವಿಧ ಖಾತೆಗಳನ್ನು ಹಂಚಲಾಯಿತು ಮತ್ತು ವಿವಿಧ ಸಂಘಗಳನ್ನು ರಚಿಸಲಾಯಿತು. ಮುಖ್ಯಗುರು ಜ್ಯೋತಿ ಕೆ ಇವರು ಮಾರ್ಗದರ್ಶನ ನೀಡಿದರು.ಸಹಶಿಕ್ಷಕರಾದ ಸುನೀತಾ M.H,ಸೌಮ್ಯ ಬಿ,ಅತಿಥಿ ಶಿಕ್ಷಕಿ ರವಿಕಲಾ N. ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.