ಕಾಣಿಯೂರು: ಚಾರ್ವಾಕ ಬಿಜೆಪಿ ಬೂತ್ 61ರಲ್ಲಿ ಗುರುಪೂರ್ಣಿಮೆ ಆಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಹಿರಿಯ ಗುರುಗಳಾದ ಭಾಸ್ಕರ ದೇವಿನಗರರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಗಣೇಶ್ ಉದನಡ್ಕ, ಸಮಿತಿ ಸದಸ್ಯ ಧನಂಜಯ ಕೇನಾಜೆ, ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ದೇವಿನಗರ, ಕಾರ್ಯದರ್ಶಿ ಮಾಧವ ಕೋಲ್ಪೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಲೋಕೇಶ್ ಆತಾಜೆ ಉಪಸ್ಥಿತರಿದ್ದರು.
