ಅಧ್ಯಕ್ಷರಾಗಿ ಭವಾನಿ ಉಳವ, ಕಾರ್ಯದರ್ಶಿಯಾಗಿ ದಿವ್ಯ ಕೆರೆನಾರು

ಕಾಣಿಯೂರು: ಕುದ್ಮಾರು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಕುದ್ಮಾರು ಇದರ ವತಿಯಿಂದ ಆ.8ರಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ರಮಾನಂದ ಭಟ್, ಡಾ. ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ಸಮಿತಿ ಅಧ್ಯಕ್ಷೆ ಭವಾನಿ ಜನಾರ್ದನ ಗೌಡ ಉಳವ, ಜಯಂತಿ ದೋಳ, ಪವಿತ್ರಾ ಚೆನ್ನಪ್ಪ ಗೌಡ ನೂಜಿ, ಉಮ್ಮಕ್ಕ ಅನ್ಯಾಡಿ, ಜನಾರ್ದನ ಗೌಡ ಅನ್ಯಾಡಿ, ಉಮೇಶ್ ಕೆರೆನಾರು ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ- ಕುದ್ಮಾರು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷರಾಗಿ ಲಕ್ಷ್ಮೀ ಜನಾರ್ದನ ಗೌಡ ಹೊಸವಕ್ಲು, ಅಧ್ಯಕ್ಷರಾಗಿ ಭವಾನಿ ಜನಾರ್ದನ ಗೌಡ ಉಳವ, ಉಪಾಧ್ಯಕ್ಷರಾಗಿ ಜಯಂತಿ ದೋಳ, ಸುಜಾತ ಹೊಸೋಕ್ಲು, ಕಾರ್ಯದರ್ಶಿಯಾಗಿ ದಿವ್ಯ ಕೆರೆನಾರು, ಜತೆ ಕಾರ್ಯದರ್ಶಿಯಾಗಿ ಪ್ರಶಾಂತಿ ನಾಯ್ತಡ್ಕ, ಕೇಶವತಿ ಕುವೆತ್ತೋಡಿ, ಕೋಶಾಧಿಕಾರಿಯಾಗಿ ಉಮ್ಮಕ್ಕ ಅನ್ಯಾಡಿ ಆಯ್ಕೆಯಾಗಿದ್ದಾರೆ.