ವಿಟ್ಲ: ಇಲ್ಲಿನ ಬೊಬ್ಬೆಕೇರಿಯಲ್ಲಿರುವ ಬಾರ್ & ರೆಸ್ಟೋರೆಂಟ್ ಹಾಗೂ ವಸತಿಗೃಹಕ್ಕೆ ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಕರುಣಾಕರ ವಿ.ರವರ ನೇತೃತ್ವದಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿಗಳು ತಂಡ ತೆರಳಿ ತಪಾಸಣೆ ನಡೆಸಿದ ಘಟನೆ ಜು.11ರಂದು ನಡೆದಿದೆ.

ಈ ಸಂದರ್ಭದಲ್ಲಿ ಬಾರ್ & ರೆಸ್ಟೋರೆಂಟ್ ಹಾಗೂ ವಸತಿಗ್ರಹದಲ್ಲಿ ಸ್ವಚ್ಚತೆ ಕಾಪಾಡದೇ ಇರುವುದು ಕಂಡುಬಂದಿದ್ದು, ಕೂಡಲೇ ಸಂಸ್ಥೆಯ ವ್ಯವಸ್ಥಾಪಕರನ್ನು ಕರೆಸಿದ ಅಧಿಕಾರಿಗಳ ತಂಡ ಅವರಿಗೆ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ಮುಂದುವರಿದರೆ ದಂಡ ವಿಧಿಸಿ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು. ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಣೆ ಮಾಡಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಲು ಸೂಚಿಸಲಾಯಿತು ಮಾತ್ರವಲ್ಲದೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಲಾಯಿತು. ಉದ್ದಿಮೆಯ ಸ್ವತ್ತಿನ ಇ ಖಾತಾ ಮಾಡುವಂತೆ ತಿಳುವಳಿಕೆ ನೀಡಲಾಯಿತು. ಬಳಿಕ ಚಂದಳಿಕೆಯಲ್ಲಿರುವ ಗೇರು ಬೀಜ ಕಾರ್ಖಾನೆಗೆ ತೆರಳಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿ ಲ್ಯಾನ್ಸಿ ಬ್ರಿಯಾನ್ ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.