ಪುತ್ತೂರು : ಕುಲಾಲ ಸಂಘ ಬೆಂಗಳೂರು (ರಿ) ಇದರ ಕಾರ್ಯಚಟುವಟಿಕೆಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಎ ನಿವೇಶನ ಮಂಜೂರ ಮಾಡುವಂತೆ ಶಾಸಕ ಅಶೋಕ್ ರೈ ಅವರು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್ ಹ್ಯಾರಿಸ್ ರವರಿಗೆ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕುಂಬಾರಿಕೆ ಕುಲಕಸುಬು ಮಾಡಿಕೊಂಡಿರುವ ಕುಂಬಾರ ಸಮುದಾಯವು ಕುಲಾಲ/ಮೂಲ್ಯ/ಹಾಂಡ ಹೆಸರುಗಳಿಂದ ಕರೆಯಲ್ಪಡುತ್ತಿದ್ದು, ಈ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿರುತ್ತದೆ. ಕುಂಬಾರಿಕೆ ವೃತ್ತಿಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಉದ್ಯೋಗಕ್ಕಾಗಿ ಸದರಿ ಸಮುದಾಯದ ಬೆಂಗಳೂರಿಗೆ ಆಗಮಿಸಿ ಇಲ್ಲಿ ನೆಲೆಸಿ ಉದ್ಯೋಗ, ಉದ್ಯಮದಲ್ಲಿ ಹಾಗೂ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ನೆಲೆಸಿದ್ದು, ಸಮುದಾಯದ ಕೆಳಹಂತದಿಂದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ “ಕುಲಾಲ ಸಂಘ ಬೆಂಗಳೂರು (ರಿ) ಸಂಘ ರಚಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಸಂಘವು ಸಮುದಾಯದ ಜನರಿಗೆ ಕುಂಬಾರಿಕೆ ತರಬೇತಿ ನೀಡಲು ಮತ್ತು ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಹಾಗೂ ಸಂಘದ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಬೆಂಗಳೂರು ನಗರದಲ್ಲಿ ಒಂದು ಸಾಂಸ್ಕೃತಿಕ ಭವನವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದ ಈ ಸಮುದಾಯ ಸ್ವಂತ ಸಂಪನ್ಮೂಲದಿಂದ ನೀವೇಶನ ಖರೀಸುವುದು ಸಾಧ್ಯವಿಲ್ಲವಾದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಲಹಳ್ಳಿಯಲ್ಲಿರುವ ಇರುವ 1263 ಚದರ ಅಡಿಯ (ಸಿಎ ಸೈಟ್) ಜಮೀನು ಗುರುತಿಸಿ ಸದರಿ ನಿವೇಶನ ಮಂಜೂರು ಮಾಡಲು ಮನವಿ ಸಲ್ಲಿಸಿ ಅದರ ಸುಂಕವನ್ನು ಪಾವತಿಸಿರುತ್ತಾರೆ.
ಆದ್ದರಿಂದ ಕುಲಾಲ ಸಂಘ ಬೆಂಗಳೂರು (ರಿ) ಸಂಘದ ಸಾಂಸ್ಕೃತಿಕ ಭವನ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಲಹಳ್ಳಿಯಲ್ಲಿರುವ ಸದರಿ ಸಂಸ್ಥೆಯವರು ಗುರುತಿಸಿ ಸುಂಕ ಪಾವತಿಸಿರುವ ಇರುವ 1263 ಚದರ ಅಡಿಯ (ಸಿಎ ಸೈಟ್) ಜಮೀನು ಮಂಜೂರು ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕುಲಾಲ ಸಂಘದ ಪ್ರಮುಖರು ಉಪಸ್ಥಿತರಿದ್ದರು.