ಮಂಗಳೂರಿನ ಬಿಜೈಯಲ್ಲಿ ದಿವಾಕರ ದಾಸ್ ನೇರ್ಲಾಜೆ ಮಾಲಕತ್ವದ ಎಸ್‌ಎಲ್‌ವಿ ಬುಕ್‌ ಹೌಸ್ ನ ವಿಸ್ತೃತ ಮಳಿಗೆ ಶುಭಾರಂಭ

0

ವಿಟ್ಲ: ರಾಜ್ಯಾದ್ಯಾಂತ ಪುಸ್ತಕ ಹಾಗೂ ಸ್ಟೇಷನರಿ ಐಟಮ್‌ಗಳ ಮಾರಾಟದಲ್ಲಿ ತನ್ನದೇ ಆದ ಛಾಪು ಮೂಡಿಸಿ ಅಗ್ರಸ್ಥಾನದಲ್ಲಿರುವ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆರವರ ಮಾಲಕತ್ವದ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ. ನ ಅಂಗ ಸಂಸ್ಥೆ ಎಸ್.ಎಲ್.ವಿ. ಬುಕ್ ಹೌಸ್ ನ ಮಂಗಳೂರಿನ ಬಿಜೈ ಶಾಖೆಯು ವಿಸ್ತೃತಗೊಂಡು ಜು.12ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆಯ ಮೂಲಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತುರವರು ಪ್ರಥಮ ಖರೀದಿ ಮಾಡಿ ಶುಭಹಾರೈಸಿದರು.

ರಘುರಾಮ ದಾಸ್, ರಾಮ್‌ದಾಸ್‌ ಶೆಟ್ಟಿ ವಿಟ್ಲ, ಚಂದ್ರಕಾಂತ್‌ ಬೆಂಗಳೂರು, ಉದ್ಯಮಿ ಸದಾಶಿವ ದಾಸ್‌‌‌, ಕಟ್ಟಡದ ಮಾಲಕರಾದ ಡಾ. ಶಶಿಕಾಂತ ತಿವಾರಿ,ಪಿ.ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಪುಷ್ಪಾವತಿ ದಾಸ್, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ರಾಜ ಅಂಚನ್, ದಿನೇಶ್‌ ದಾಸ್‌, ಯೋಗೀಶ್‌ ನೇರ್ಲಾಜೆ, ವಜ್ರೇಶ್ವರಿ, ಸವಿತಾ, ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ದಿವಾಕರ್‌ ದಾಸ್‌ ನೇರ್ಲಾಜೆ ಹಾಗೂ ಅವರ ಪತ್ನಿ ಹೇಮಾವತಿ ದಿವಾಕರ್‌ ದಾಸ್‌ ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಥೆ ಇನ್ನಷ್ಟು ವಿಸ್ತೃತ
ಆಯ್ಕೆಗೆ ವಿಪುಲ ಅವಕಾಶ

ಕೆಲ ವರುಷಗಳ ಹಿಂದೆ ಬಿಜೈ ಚರ್ಚ್ ಮುಂಭಾಗದಲ್ಲಿ ಎಸ್.ಎಲ್.ವಿ. ಬುಕ್ ಹೌಸ್ ನ‌ ಶಾಖೆಯನ್ನು ತೆರೆದಿದ್ದೇವೆ. ನಮಗೆ ಆರಂಭದ ದಿನಗಳಿಂದಲೂ ಗ್ರಾಹಕರಿಂದ ಉತ್ತಮ ಸಹಕಾರ ದೊರೆತಿದೆ. ಈಗಾಗಲೇ ಈ ಭಾಗದಲ್ಲಿ ಗ್ರಾಹಕರು ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಪ್ರಥಮ ಮಹಡಿಗೆ ವಿಸ್ತರಿಸಲಾಗಿದೆ. ಗ್ರಾಹಕರಿಗೆ ವಸ್ತುಗಳನ್ನು ಖರೀದಿಗೆ ವಿಫುಲ ಅವಕಾಶಗಳನ್ನು‌ ಒದಗಿಸುವ ನಿಟ್ಟಿನಲ್ಲಿ ಪುಸ್ತಕ, ಸ್ಟೆಷನರಿ, ಆಡಿಕೆಗಳು, ಆಲಂಕಾರಿಕ ವಸ್ತುಗಳು ಹಾಗೂ ಗಿಫ್ಟ್ ಐಟಂಗಳನ್ನು ಪ್ರತ್ಯೇಕವಾಗಿ ಜೋಡಿಸಲಾಗಿದೆ. ಈವರೆಗೆ ಸಹಕಾರ ನೀಡಿದ ನಮ್ಮ ಗ್ರಾಹಕ‌ಬಂಧುಗಳಿಗೆ ನಾವುಗಳು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.

ದಿವಾಕರ ದಾಸ್ ನೇರ್ಲಾಜೆ
ಆಡಳಿತ ನಿರ್ದೇಶಕರು
ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ.


LEAVE A REPLY

Please enter your comment!
Please enter your name here