ಪುತ್ತೂರು: ಪುತ್ತೂರು ತಾಲೂಕು ಬಿಲ್ಲವ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಪುಷ್ಪಾವತಿ ಕೇಕುಡ ಸವಣೂರು, ಕಾರ್ಯದರ್ಶಿಯಾಗಿ ಗೀತಾ ರಮೇಶ್ ಅಂಚನ್ ಮುಂಡೂರು ಮತ್ತು ಕೋಶಾಧಿಕಾರಿಯಾಗಿ ಪ್ರೇಮಲತಾ ದೇವದಾಸ್ ಡೆಕ್ಕಾಜೆ ಕೋಡಿಂಬಾಡಿ ಆಯ್ಕೆಯಾಗಿದ್ದಾರೆ.

ಬಪ್ಪಳಿಗೆಯಲ್ಲಿರುವ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಭಾಭವನದಲ್ಲಿ ಜು.12ರಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ವೇದಿಕೆಯ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರುಗಳಾಗಿ ಶಕುಂತಳಾ ಬೆಟ್ಟಂಪಾಡಿ, ಶ್ವೇತಾ ಕಡಬ ಮತ್ತು ಜತೆ ಕಾರ್ಯದರ್ಶಿಯಾಗಿ ಪ್ರೀತಿಕಾ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ವೇದಿಕೆ ನಿಕಟಪೂರ್ವ ಅಧ್ಯಕ್ಷೆ ವಿಮಲ ಸುರೇಶ್, ಉಪಾಧ್ಯಕ್ಷೆ ವಿದ್ಯಾ, ಕಾರ್ಯದರ್ಶಿ ಸುಷ್ಮಾ ಸತೀಶ್, ಜೊತೆ ಕಾರ್ಯದರ್ಶಿ ಆಶಾ ಸಚೀಂದ್ರ, ಮಹಿಳಾ ವೇದಿಕೆಯ ಸಂಚಾಲಕಿ ಉಷಾ ಅಂಚನ್, ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಉಪಾಧ್ಯಕ್ಷ ಅಶೋಕ್ ಪಡ್ಪು, ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ ಮತ್ತು ಗುರು ಮಂದಿರದ ಕಾರ್ಯ ನಿರ್ವಹಣಾಧಿಕಾರಿ ಉದಯ ಕೋಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಪ್ರಾರ್ಥಿಸಿ ವಿಮಲಾ ಸುರೇಶ್ ಸ್ವಾಗತಿಸಿದರು. ಸುಷ್ಮಾ ಸತೀಶ್ ಲೆಕ್ಕಪತ್ರ ವಾಚಿಸಿದರು. ಆಶಾ ಸಚಿಂದ್ರ ವಂದಿಸಿದರು. ನಿರ್ಗಮಿತ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ದಾಖಲೆ ಪತ್ರಗಳನ್ನು ನೀಡಿ ಅಧಿಕಾರ ಹಸ್ತಾಂತರಿಸಿದರು.
ಮಹಾಸಭೆಯಲ್ಲಿ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷರುಗಳು, 55 ಗ್ರಾಮ ಸಮಿತಿಯ ಮಹಿಳಾ ಪದಾಧಿಕಾರಿಗಳು, ವಲಯ ಸಂಚಾಲಕರು, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಅನಂತಿಮಾರು ಮತ್ತಿತರರು ಭಾಗವಹಿಸಿದ್ದರು.