ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ ಮುಅಲ್ಲಿಮ್ ಡೇ, ಸನ್ಮಾನ

0

ರಾಮಕುಂಜ: ನೀರಾಜೆ ನೂರುಲ್ ಮದ್ರಸದಲ್ಲಿ ಮುಅಲ್ಲಿಮ್ ಡೇ ಹಾಗೂ ಸನ್ಮಾನ ಕಾರ್ಯಕ್ರಮ ಜು.13ರಂದು ನಡೆಯಿತು.

ಲತೀಫ್ ಫೈಝಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕಾಮ ಆರಂಭಗೊಂಡಿತು. ಸ್ಥಳೀಯ ಸದರ್ ಉಸ್ತಾದರಾದ ಕೆ.ಯು.ಶೌಕತ್ ಅಲಿ ಅಸ್ಲಮಿ ಸ್ವಾಗತಿಸಿದರು. ನೀರಾಜೆ ಮದ್ರಸ ಸಮಿತಿ ಅಧ್ಯಕ್ಷರಾದ ಎನ್.ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷರಾದ ಬಹು| ಸಯ್ಯದ್ ಜುನೈದ್ ಜಿಫ್ರೀ ತಂಙಳ್ ದುಃವಾಶೀರ್ವಚನ ನೀಡಿದರು. ಗಂಡಿಬಾಗಿಲು ಖತೀಬರಾದ ಸುಲ್ತಾನ್ ದಾರಿಮಿ ವಿಷಯ ಮಂಡಿಸಿ ಪ್ರಭಾಷಣ ಮಾಡಿದರು.

ಸನ್ಮಾನ:
ಪವಿತ್ರ ಉಮ್ರಾ ಯಾತ್ರೆಗೆ ಹೊರಟಿರುವ ನೀರಾಜೆ ಮದ್ರಸ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಜುನೈದ್ ಜಿಫ್ರೀ ತಂಙಳ್, ಯೂಸುಫ್ ನೀರಾಜೆ, ಯಾಕೂಬ್ ಕೊಯಿಲ, ಆದಂ ಕೆ., ಹಿರಿಯರಾದ ಫಾರೂಕ್ ತಂಙಳ್, ಹಸೈನಾರ್ ಹಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮದ್ರಸ ಆಡಳಿತ ಸಮಿತಿ ಕೋಶಾಧಿಕಾರಿ ನಝೀರ್, ಕಾರ್ಯದರ್ಶಿ ಪುತ್ತುಕುಂಞಿ, ಸದಸ್ಯರಾದ ಇಸ್ಮಾಯಿಲ್, ಸಿದ್ದೀಕ್, ಯಂಗ್ ಮೆನ್ಸ್ ಅಧ್ಯಕ್ಷ ಸಿರಾಜ್, ವಿಖಾಯ ಚೆಯರ್‌ಮೇನ್ ಅಬ್ದುಲ್ ಅಝೀಝ್, ಇಕ್ಬಾಲ್, ಸಿ.ಎಂ.ಸಿರಾಜ್, ಜಾಬಿರ್, ಸುಜಾಹ್, ಎಸ್‌ಕೆಎಸ್‌ಎಸ್‌ಎಫ್ ಶಾಖೆ ಸದಸ್ಯರು, ಯಂಗ್ ಮೆನ್ಸ್ ಸದಸ್ಯರು ಹಾಗೂ ಮದ್ರಸ ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here