ಅಧ್ಯಕ್ಷೆ: ಉಷಾಅಂಚನ್, ಉಪಾಧ್ಯಕ್ಷೆ: ಪ್ರವೀಣಿ ಸುಧಾಕರ್, ಕಾರ್ಯದರ್ಶಿ: ದಿವ್ಯಾಯಶೋಧರ್
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕರ ಸಂಘ ನೆಲ್ಯಾಡಿ ಇದರ ಸಹಯೋಗದಲ್ಲಿ ನಡೆಯುವ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ ನೆಲ್ಯಾಡಿ ಇದರ ಅಧ್ಯಕ್ಷರಾಗಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಉಪಾಧ್ಯಕ್ಷೆಯಾಗಿ ಪ್ರವೀಣಿ ಸುಧಾಕರ್ ಹಾಗೂ ಕಾರ್ಯದರ್ಶಿಯಾಗಿ ದಿವ್ಯಾಯಶೋಧರ್ ಆಯ್ಕೆಯಾಗಿದ್ದಾರೆ.
ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ಶ್ವೇತ, ಕೋಶಾಧಿಕಾರಿಯಾಗಿ ರತಿ ಗೋಳಿತ್ತೊಟ್ಟು, ಸಂಚಾಲಕರಾಗಿ ಚೈತನ್ಯ, ಸಹ ಸಂಚಾಲಕರಾಗಿ ವಾರಿಜ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಸಂಪಾವತಿ, ಅಕ್ಷತ, ಹರಿಣಾಕ್ಷಿ, ಶುಭಲಕ್ಷ್ಮೀ, ಸವಿತಾ ಜೆ., ಮೇಘನಾ ಶೈನ್, ಶಾಲಿನಿ ಗೋಳಿತ್ತೊಟ್ಟು, ಮೈತ್ರಿ ಉದನೆ, ಜಯಂತಿ, ಶ್ರೀಲತಾ ಸಿ.ಹೆಚ್. ಆಯ್ಕೆಯಾಗಿದ್ದಾರೆ. ಆ.8ರಂದು ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ ಎಂದು ನೂತನ ಅಧ್ಯಕ್ಷರು ತಿಳಿಸಿದ್ದಾರೆ.
