ಕೆಯ್ಯೂರು: ಶ್ರೀ ಮಹೀಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಇದರ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆಯು ದೇವಾಲಯದ ಸಭಾಂಗಣದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಅಧ್ಯಕ್ಷತೆಯಲ್ಲಿ ನಡೆಯಿತು.
ಇದರ ಗೌರವಾಧ್ಯಕ್ಷರಾಗಿ ಹರ್ಷಕುಮಾರ್ ರೈ ಮಾಡಾವು ಅಧ್ಯಕ್ಷರಾಗಿ ಹರೀಶ್ ನಾಯ್ಕ ಕಣಿಯಾರು, ಉಪಾಧ್ಯಕ್ಷರಾಗಿ ವಿನಯ ಕೊಡ್ಲೆ, ಕಾರ್ಯದರ್ಶಿ ದೀಕ್ಷಿತ್ ಕಣಿಯಾರು, ಕೋಶಾಧಿಕಾರಿ ಅಶೋಕ ಇಳಾಂತಜೆ, ಸದಸ್ಯರಾಗಿ, ಶೀನಪ್ಪ ರೈ ದೇವಿನಗರ,. ರವಿಂದ್ರ ಕೆ.ಎಸ್ ಕಣಿಯಾರು, ಪ್ರಮಿತ್ ರಾಜ್ ಕಟ್ಟತ್ತಾರು, ಮೋಹನ ಅಜಿಲ ಕಣಿಯಾರು, ಜಯಂತ ಪೂಜಾರಿ ಕೆಂಗುಡೇಲು, ಈಶ್ವರ ಕುಲಾಲ್ ಬೊಳಿಕ್ಕಳ, ರಾಧಾಕೃಷ್ಣ ಗೌಡ ಕೆಯ್ಯೂರು, ರಾಕೇಶ್ ಬಲ್ಲಾಳ್ ಸಣoಗಳ, ವಿಜಯ್ ಕುಮಾರ್ ಸಣಂಗಲ, ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಶ್ರೀನಿವಾಸ್ ರಾವ್, ಉಮಾಕಾಂತ ಬೈಲಾಡಿ, ಸದಸ್ಯರಾದ ಜಲಜಾಕ್ಷಿ ಎ.ರೈ ಸಾಗು, ಸುಜಯ ಕೆಯ್ಯೂರು, ಉಮಾಕಾಂತ್ ಬೈಲಾಡಿ , ಅಶೋಕ್ ರೈ ದೇರ್ಲ, ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ, ಸಂದರ್ಭದಲ್ಲಿ ದೇವಲಯದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕಲ, ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು, ದೇವಾಲಯದ ನೌಕರರು ಉಪಸ್ಥಿತರಿದ್ದರು.