ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಗೈಡ್ಸ್ ದಳದವರು ‘ಏಕ್ ಪೇಡ್ ಮಾ ಕೇ ನಾಮ್’ ಎಂಬ ಕಾರ್ಯಕ್ರಮದಡಿಯಲ್ಲಿ ‘ಮುಖ್ಯಗುರುಗಳು ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಅಮ್ಮ’ ಎಂದು ಮುಖ್ಯಶಿಕ್ಷಕರಿಗೆ ಗಿಡ ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ಮಾತನಾಡಿ “ಹಸಿರು ಪ್ರಕೃತಿ ನಮಗೆ ನೀಡಿರುವ ಹರುಷದ ಉಸಿರು. ನಾವು ನೆಲೆಸಿರುವುದು, ಬದುಕಿರುವುದು ಈ ಪ್ರಕೃತಿಯ ನೆಲೆಯಿಂದಲೇ. ದೇವರು ನಮಗೆ ನೀಡಿದ ಈ ಭೂಮಿ, ಎಲ್ಲಾ ಜೀವಸಂಕುಲಕ್ಕೆ ಆಸರೆ. ನಾವು ಆಚರಿಸುವ ವನಮಹೋತ್ಸವ ಕಾರ್ಯಕ್ರಮ ಕೇವಲ ಒಂದು ದಿನ ಅಥವಾ ಕೆಲವೇ ದಿನಗಳಿಗೆ ಸೀಮಿತವಾಗದೆ ಜೀವನ ಪರ್ಯಂತ ನಮ್ಮದಾಗಿಸೋಣ. ಸ್ವಚ್ಛ ತರಗತಿ, ಸ್ವಚ್ಛ ಶಾಲೆ, ಸ್ವಚ್ಛ ಮನೆ, ಸ್ವಚ್ಛ ಪರಿಸರಕ್ಕೆ ನಾಂದಿ ಎಂದರಿತು ಮರಗಿಡಗಳನ್ನು ನೆಟ್ಟು, ಪೋಷಿಸಿ ಮುಂದಿನ ಪೀಳಿಗೆಗೆ, ಪ್ರಾಣಿಪಕ್ಷಿಗಳಿಗೆ ಈ ದೈವದತ್ತ ನಿಧಿಯನ್ನು ಕೊಡುಗೆಯಾಗಿ ನೀಡೋಣ ಎಂದು ಹೇಳಿದರು. ಶಾಲಾ ನಾಯಕಿ ಕು| ಮಾನ್ಯ ಹಾಗೂ ಪರಿಸರ ಸಂಘದ ಅಧ್ಯಕ್ಷೆ ಕು| ಮಾನ್ಯತ ಉಪಸ್ಥಿತರಿದ್ದರು.
ಪರಿಸರ ಸಂಘದ ತರಗತಿ ಪ್ರತಿನಿಧಿಗಳು ಅನೇಕ ಔಷಧೀಯ ಸಸ್ಯಗಳನ್ನು ಕುಂಡಗಳಲ್ಲಿ ನೆಟ್ಟು, ಅದರ ಮಹತ್ವ ತಿಳಿಸಿದರು. ಹಾಗೂ ಪರಿಸರ ರಕ್ಷಣೆಯ ಅಗತ್ಯತೆಯನ್ನು ಸಾರುವ ಗೀತೆಗಳನ್ನು ಹಾಡಿದರು. ಕು| ಖುಷಿ ಕೆ. ಎಂ. ದಿನದ ಮಹತ್ವ ತಿಳಿಸಿದರು. ಕು| ಮಾನ್ಯತಾ ಎ. ಸ್ವಾಗತಿಸಿ, ಕು| ಇವಾ ವಂದಿಸಿದರು. ಕು| ರಿಶಿಟ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪರಿಸರದ ಸಂಘದ ವಿದ್ಯಾರ್ಥಿನಿಯರು ಕಾರ್ಯಕ್ರಮ ಅಯೋಜಿಸಿದರು.