ಬಡಗನ್ನೂರು: ಅರಿಯಡ್ಕ ಶೌರ್ಯ ಘಟಕದ ಸ್ವಯಂಸೇವಕರಾದ ಕೃಷ್ಣ ಇವರು ಶೌರ್ಯ ಕೆಲಸ ಮಾಡಲು ಆಟೋರಿಕ್ಷಾ ಹೋಗುವಾಗ ಸಂದರ್ಭದಲ್ಲಿ ಆಟೋ ಸ್ಕಿಡ್ ಆಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇವರಿಗೆ ಶೌರ್ಯ ಆರೋಗ್ಯ ವಿಮೆಯಿಂದ 75 ಸಾವಿರ ರೂ. ಮಂಜೂರು ಆಗಿದೆ.
ಮಂಜೂರಾತಿ ಪತ್ರವನ್ನು ಜನಜಾಗೃತಿ ಅಧ್ಯಕ್ಷ ವಿಕ್ರಂ ರೈ ಸಾಂತ್ಯ, ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳ, ವಲಯ ಮೇಲ್ವಿಚಾರಕ ಹರೀಶ್ ಕೆ ಹಾಗೂ ಘಟಕ ಸಂಯೋಜಕಿ, ಪ್ರತಿನಿಧಿ ಮತ್ತು ಶೌರ್ಯದ ಸ್ವಯಂ ಸೇವಕರ ಉಪಸ್ಥಿತಿಯಲ್ಲಿ ಮಂಜೂರಾತಿ ಪತ್ರವನ್ನು ನೀಡಲಾಯಿತು.