ಸಾಮೆತ್ತಡ್ಕ: ಅಕ್ರಮ ವೇಶ್ಯಾವಾಟಿಕೆ ಆರೋಪಿಗಳಿಗೆ ಜಾಮೀನು

0


ಪುತ್ತೂರು:
ಇಲ್ಲಿನ ಸಾಮೆತ್ತಡ್ಕದಲ್ಲಿ ಪತ್ತೆಯಾಗಿದ್ದ ಅಕ್ರಮ ವೇಶ್ಯಾವಾಟಿಕೆ ಪ್ರಕರಣದ ಆರೋಪಿಗಳಾಗಿ ಬಂಽತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಜು.1ರಂದು ರಾತ್ರಿ ಮಹಿಳಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು.ಸಾಮೆತ್ತಡ್ಕದಲ್ಲಿ ವಿಲ್ರೆಡ್ ಡಿೞಸೋಜ ಎಂಬವರ ಮನೆ ಸಮೀಪದ ಕಟ್ಟಡದಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿಯಾಧರಿಸಿ ಈ ದಾಳಿ ನಡೆದಿತ್ತು.ಅಲ್ಲಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದ ಪೊಲೀಸರು ಆರೋಪಿಗಳಾದ ವಿಲ್ರೆಡ್ ಡಿ ಸೋಜ ಮತ್ತು ಸುಳ್ಯ ಮೂಲದ ಲಕ್ಷ್ಮೀಶ ಎಂಬವರನ್ನು ಬಂಽಸಿದ್ದರು.ಬಂಽತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳ ಪರ ವಕೀಲರಾದ ಉದಯಶಂಕರ ಶೆಟ್ಟಿ ಅರಿಯಡ್ಕ, ಕೃಷ್ಣವೇಣಿ,ರಾಕೇಶ್ ಮಸ್ಕರೇನ್ಹಸ್,ಸಂಧ್ಯಾ ಮತ್ತು ಕುಮಾರನಾಥ ಎಸ್.ವಾದಿಸಿದ್ದರು.

LEAVE A REPLY

Please enter your comment!
Please enter your name here