ಸಮಸ್ತ ಮುಅಲ್ಲಿಂ ಒಕ್ಕೂಟದಿಂದ ಸ್ಪೀಕರ್ ಯು.ಟಿ ಖಾದರ್ ಭೇಟಿ- ಮದರಸ ಅಧ್ಯಾಪಕರಿಗೆ ಗೌರವ ಧನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ

0

ಪುತ್ತೂರು: ರಾಜ್ಯದ ಮದರಸಗಳಲ್ಲಿ ಸೇವೆಗೈಯುತ್ತಿರುವ ಮುಅಲ್ಲಿಮರಿಗೆ (ಮದ್ರಸಾ ಅಧ್ಯಾಪಕರಿಗೆ) ರಾಜ್ಯ ಸರಕಾರದಿಂದ ಗೌರವಧನ ಒದಗಿಸುವ ಕುರಿತು ಚರ್ಚಿಸಲು ಸಮಸ್ತ ಮುಅಲ್ಲಿಂ ಒಕ್ಕೂಟದ ನಿಯೋಗವು ಸ್ಪೀಕರ್ ಯು.ಟಿ.ಖಾದರ್ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದರು. ಮದರಸ ಅಧ್ಯಾಪಕರು ಎದುರಿಸುತ್ತಿರುವ ಸವಾಲುಗಳು, ಅವರ ಕೊಡುಗೆಗಳು ಮತ್ತು ಅವರಿಗೆ ಗೌರವಧನ ನೀಡುವ ಮೂಲಕ ಸಮಾಜದಲ್ಲಿ ಅವರ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಹಾಗೂ ಮದರಸ ಅಧ್ಯಾಪಕರ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.


ಈ ವಿಚಾರದಲ್ಲಿ ಸರಕಾರದ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸಮಸ್ತ ಮುಅಲ್ಲಿಂ ಒಕ್ಕೂಟ ಮಾಡಿದ ಮನವಿಗೆ ಸ್ಪೀಕರ್ ಯು.ಟಿ ಖಾದರ್ ಅವರು ಸ್ಪಂದಿಸುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ದ.ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಪಮ್ಮಲೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ, ಎಸ್ಕೆಎಸ್‌ಎಸ್‌ಎಫ್ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳಾದ ಅಶ್ರಫ್ ಫೈಝಿ ಬೆಳ್ತಂಗಡಿ, ಅಬ್ದುಲ್ ರಝಾಕ್ ಮದನಿ ಸುರತ್ಕಲ್, ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಸಾಲೆತ್ತೂರು, ಮುಸ್ತಫಾ ಫೈಝಿ ಮಿತ್ತಬೈಲು, ಫಝಲ್ ರಹ್ಮಾನ್ ಮುಸ್ಲಿಯಾರ್ ಮಂಗಳೂರು, ಕಾಸಿಂ ಅರ್ಷದಿ ಫರಂಗಿಪೇಟೆ, ಕಚೇರಿ ಕಾರ್ಯದರ್ಶಿ ತಮೀಮ್ ಅನ್ಸಾರಿ ಹಾಗೂ ವಿವಿಧ ರೇಂಜ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here