ರೋಟರಿ ಕ್ಲಬ್ ಪುತ್ತೂರು ಸ್ವರ್ಣ- ಅಧ್ಯಕ್ಷ: ಸುಭಾಷ್ ರೈ, ಕಾರ್ಯದರ್ಶಿ:ಪ್ರವೀಣ್ ರೈ, ಕೋಶಾಧಿಕಾರಿ:ವಿಜಯ್ ಡಿ’ಸೋಜ, ವಲಯ ಸೇನಾನಿ: ಸುರೇಶ್ ಪಿ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಪ್ರವೀಣ್ ರೈ ಸಾಂತ್ಯ, ಕೋಶಾಧಿಕಾರಿಯಾಗಿ ವಿಜಯ್ ವಿಲ್ಫ್ರೆಡ್ ಡಿ’ಸೋಜರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಸಾರ್ಜಂಟ್ ಎಟ್ ಆಮ್ಸ್೯ ರಾಮಣ್ಣ ರೈ ಕೈಕಾರ, ಜೊತೆ ಕಾರ್ಯದರ್ಶಿ ಹಾಗೂ ಯೂತ್ ಸರ್ವಿಸ್ ನಿರ್ದೇಶಕಿ ಮೀನಾಕ್ಷಿ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಪಿ, ಕ್ಲಬ್ ಸರ್ವಿಸ್ ನಿರ್ದೇಶಕ ದಿನೇಶ್ ಆಚಾರ್ಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುಂದರ್ ರೈ ಬಲ್ಕಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ವೆಂಕಟ್ರಮಣ ಗೌಡ ಕಳುವಾಜೆ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಕೆ.ಭಾಸ್ಕರ ಕೋಡಿಂಬಾಳ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಚೇರ್ಮನ್ ಗಳಾಗಿ ಕೆ.ಪಿ ನಾರಾಯಣ ರೈ(ಪಲ್ಸ್ ಪೋಲಿಯೊ), ಮಹಾಬಲ ಗೌಡ(ಟಿ.ಆರ್.ಎಫ್), ದೀಪಕ್ ಬೊಳ್ವಾರು (ಮೆಂಬರ್ ಶಿಪ್), ಆಶಾ ಮರಿಯಾ ರೆಬೆಲ್ಲೋ (ಟೀಚ್), ರೋಶನ್ ರೈ ಬನ್ನೂರು(ವಿನ್ಸ್), ರವೀಶ್ ಆಚಾರ್ಯ(ವೆಬ್), ಸಂಧ್ಯಾರಾಣಿ ಬೈಲಾಡಿ(ಸಿ.ಎಲ್.ಸಿ.ಸಿ), ಗೋಪಾಲಕೃಷ್ಣ ಆಚಾರ್ಯ(ವಾಟರ್&ಸ್ಯಾನಿಡೇಶನ್), ದೀಪಯ ಮಿನೇಜಸ್(ಪಬ್ಲಿಕ್ ಇಮೇಜ್), ಸೀತಾರಾಮ ಗೌಡ(ಪರಿಸರ), ಸುನಿಲ್ ಜಾಧವ್(ಇಂಟರ್ಯಾಕ್ಟ್) ರವರು ಆಯ್ಕೆಯಾಗಿದ್ದಾರೆ.


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಸ್‌ ರೈರವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರು. ಪ್ರಗತಿಪರ ಕೃಷಿಕರಾದ ಇವರು ಕೃಷಿಯೊಂದಿಗೆ ರತ್ನಶ್ರೀ ಜ್ಯುವೆಲ್ಲರ್ಸ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವುದಲ್ಲದೇ, ಹಲವಾರು ಬ್ಯಾಂಕ್, ಸಹಕಾರ ಸಂಘ, ಇತ್ಯಾದಿಗಳ ಅಧಿಕೃತ ಚಿನ್ನಾಭರಣಗಳ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾ ರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿದ್ದು ಎನ್.ಸಿ.ಸಿ ಕೆಡೆಟ್ ಆಗಿಯೂ ಗುರುತಿಸಿಕೊಂಡಿರುತ್ತಾರೆ. ಹಲವಾರು ಸಂಘ ಸಂಸ್ಥೆ, ಯುವಕ ಮಂಡಲ, ದೇವಸ್ಥಾನದಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆಯನ್ನು ನೀಡಿರುತ್ತಾರೆ. ಅಂತರ್ಜಲ ಸಂರಕ್ಷಿಸುವ ಸಲುವಾಗಿ ತನ್ನ ಜಮೀನಿನಲ್ಲಿ ಇಂಗು ಗುಂಡಿಗಳನ್ನು ತೋಡಿ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರಸ್ತುತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರವೀಣ್ ಕುಮಾರ್ ಸಾಂತ್ಯರವರು ಸದ್ಗುರು ಆಯುರ್ವೇದ ಪ್ರೊಡಕ್ಟ್ ಇಲ್ಲಿ ಟೆರಿಟರಿ ಸೇಲ್ಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ರೋಟರಿ ಕ್ಲಬ್ ಸ್ವರ್ಣದಲ್ಲಿ ಆರು ವರ್ಷಗಳಿಂದ ಸಕ್ರಿಯ ಸದಸ್ಯರಾಗಿದ್ದು ವಿವಿಧ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.

ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯ್ ಡಿ’ಸೋಜರವರು ಮಾಯಿದೆ ದೇವುಸ್ ಚರ್ಚ್ ನ ಐಸಿವೈಎಂ ಸಂಘಟನೆಯ ಅಧ್ಯಕ್ಷರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ, ಡೊನ್ ಬೊಸ್ಕೊ ಕ್ಲಬ್ ನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ರೋಟರಿ ಸ್ವರ್ಣದ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿರುವ ಇವರು ನಟನೆ ಮತ್ತು ನೃತ್ಯದಲ್ಲೂ ಒಲವನ್ನು ಹೊಂದಿರುತ್ತಾರೆ . ಎಲೆಕ್ಟ್ರಾನಿಕ್ ಡಿಪ್ಲೋಮಾ ಪದವೀಧರರಾಗಿರುವ ಇವರು ಮಂಗಳೂರಿನಲ್ಲಿ ಮಹಿಮಾ ಎಂಟರ್ಪ್ರೈಸಸ್ ಎನ್ನುವ ಹೆಸರಿನಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿನ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಮುರ ಸರಕಾರಿ ಹಿ.ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಲಯ ಸೇನಾನಿ ಪರಿಚಯ:
ರೋಟರಿ ವಲಯ ಸೇನಾನಿಯಾಗಿ ಆಯ್ಕೆಯಾಗಿರುವ ಸುರೇಶ್ ಪಿ.ರವರು ಪದವೀಧರರಾಗಿದ್ದು ಸಂಪ್ಯ ಪೆಲತ್ತಡಿ ನಿವಾಸಿ. 2001ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸರ್ಕಾರಿ ನೌಕರಿಗೆ ಸೇರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ಪ್ರಸ್ತುತ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇಲ್ಲಿ ಲೆಕ್ಕ ಪರಿಶೋಧಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. 2019-20ರಲ್ಲಿ ರೋಟರಿ ಸ್ವರ್ಣ ಕ್ಲಬ್ ಗೆ ಸೇರಿದ ಇವರು 2022-23 ನೇ ಸಾಲಿನಲ್ಲಿ ರೋಟರಿ ಪುತ್ತೂರು ಸ್ವರ್ಣದ ಕಾರ್ಯದರ್ಶಿಯಾಗಿ, ಜೊತೆಗೆ ವಿವಿಧ ಹುದ್ದೆಯನ್ನು ನಿರ್ವಹಿಸಿ 2024-25 ನೇ ಸಾಲಿನಲ್ಲಿ ರೋಟರಿ ಪುತ್ತೂರು ಸ್ವರ್ಣದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಹಲವಾರು ಜನಪರ ಸೇವೆಗಳನ್ನು ಮಾಡಿ ಕ್ಲಬ್‌ಗೆ ಡೈಮಂಡ್ ಪ್ರಶಸ್ತಿಯು ಬಂದಿರುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ಧರ್ಮದರ್ಶಿಯಾಗಿ ಸೇವೆಯನ್ನು ಮಾಡುತ್ತಿದ್ದು ಹಲವಾರು ದೈವಸ್ಥಾನ ಹಾಗೂ ದೇವಸ್ಥಾನಗಳ ಜಿರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಇವರು ಶ್ರೀ ಕೃಷ್ಣ ಯುವಕ ಮಂಡಲ ಕಂಬಳತ್ತಡ್ಡ ಆರ್ಯಾಪು ಇದರ ಪೃಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.


ಜು.17:ಪದ‌ ಪ್ರದಾನ..
ಕ್ಲಬ್ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.17 ರಂದು ಪುತ್ತೂರು ಸೈನಿಕ ಭವನ ರಸ್ತೆಯ ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಲಿದೆ. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಸುರೇಶ್ ಪಿ, ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here