ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರ, ಯಕ್ಷಗಾನ ಕಲಾಕೂಟಕ್ಕೆ ಆಯ್ಕೆ

0

ಅಧ್ಯಕ್ಷ: ಪ್ರವೀಣ್ ಜಿ.ಕೆ, ಕಾರ್ಯದರ್ಶಿ: ಸತ್ಯಪ್ರಕಾಶ್, ಕೋಶಾಧಿಕಾರಿ: ರವಿ ಕೊಂರ್ಬಡ್ಕ, ಉಪಾಧ್ಯಕ್ಷೆ: ಪ್ರೇಮಾ, ಜತೆ ಕಾರ್ಯದರ್ಶಿ: ಮಮತಾ

ಪುತ್ತೂರು: ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ಮಹಾಸಭೆಯು ಅಧ್ಯಕ್ಷರಾದ ಶ್ರೀನಿವಾಸ ಕೊಂರ್ಬಡ್ಕ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2025-26ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರವೀಣ್ ಜಿ.ಕೆ ಗೋಳಿತ್ತಡ್ಕ, ಕಾರ್ಯದರ್ಶಿಯಾಗಿ ಸತ್ಯಪ್ರಕಾಶ್ ಕುಂಟಿಕಾನ, ಖಜಾಂಜಿಯಾಗಿ ರವಿ ಕೊಂರ್ಬಡ್ಕ, ಉಪಾಧ್ಯಕ್ಷರಾಗಿ ಪ್ರೇಮ ಗಂಗಾಧರ ಪೆರ್ಲಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಮಮತ ಮಾಧವ ನಾಯ್ಕ ಗೋಳಿತ್ತಡ್ಕರವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here