ಪಾಣಾಜೆ : ಧರೆಕುಸಿತಗೊಂಡು ರಸ್ತೆ, ದೈವಸ್ಥಾನದ ಮೇಲೆ ಬಿದ್ದ ಬೃಹತ್ ಮರ-ತುಂಡಾದ ವಿದ್ಯುತ್ ಕಂಬಗಳು

0

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ಸಮೀಪದ ಉಡ್ಡoಗಳ ಎಂಬಲ್ಲಿ ಧರೆಕುಸಿತಗೊಂಡು ಬೃಹತ್ ಮರಗಳು ವಿದ್ಯುತ್ ಕಂಬ ಸಮೇತ ರಸ್ತೆಗೆ ಹಾಗೂ ಸಮೀಪದ ದೈವಸ್ಥಾನದ ಮೇಲೆ ಬಿದ್ದ ಘಟನೆ ಜು.17ರಂದು ಬೆಳಿಗ್ಗೆ ನಡೆದಿದೆ.

ಘಟನೆಯಿಂದ 6 ವಿದ್ಯುತ್ ಕಂಬಗಳು ತುಂಡಾಗಿದೆ. ದೈವಸ್ಥಾನದ ಚಾವಣಿಗೆ ಹಾನಿಯಾಗಿದೆ.

ವಾಹನ ಸಂಚಾರಕ್ಕೆ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹರಾ, ಪಿಡಿಒ ಆಶಾ, ಅರಣ್ಯ ಇಲಾಖೆಯ ಮದನ್ ಹಾಗೂ ಅಧಿಕಾರಿಗಳು ಬೆಟ್ಟoಪಾಡಿ ಮೆಸ್ಕಾಂ ಜೆಐ ಪುತ್ತು ಜೆ. ಹಾಗೂ ಸ್ಥಳೀಯರ ಸಹಕಾರದಲ್ಲಿ ತೆರವು ಕಾರ್ಯ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here