ನೆಲ್ಯಾಡಿ: ಮಹೀಂದ್ರ ಬೊಲೆರೋ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜು.16ರಂದು ಬೆಳಿಗ್ಗೆ ಕಾಂಚನ-ಪೆರಿಯಡ್ಕ ರಸ್ತೆಯ ಬಜತ್ತೂರು ಗ್ರಾಮದ ಕಾಂಚನ ಸಮೀಪದ ಕೀಜಾನ ಎಂಬಲ್ಲಿ ನಡೆದಿದೆ.
ಪೆರಿಯಡ್ಕದಿಂದ ಕಾಂಚನ ಕಡೆಗೆ ವೆಂಕಟರಾವಣಪ್ಪ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು(ಕೆಎ೦9, ಎಫ್ 5208) ಹಾಗೂ ಗೌತಮ್ ಕುಮಾರ್ ಎಂಬವರು ಕಾಂಚನದಿಂದ ಪೆರಿಯಡ್ಕ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮಹೀಂದ್ರ ಬೊಲೆರೋ (ಕೆಎ28, ಪಿ೦276) ನಡುವೆ ಬಜತ್ತೂರು ಗ್ರಾಮದ ಕೀಜಾನ ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು ಯಾರಿಗೂ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಸ್ ಚಾಲಕ ವೆಂಕಟರಾವಣಪ್ಪ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.