ಈಶ್ವರಮಂಗಲ: ಈಶ್ವರಮಂಗಲದಿಂದ ನೂಜಿಬೈಲು ಕೆಮ್ಮತ್ತಡ್ಕ ದೇಲಂಪಾಡಿ ಸಂಪರ್ಕ ರಸ್ತೆಯಲ್ಲಿ ಕೆಮ್ಮತ್ತಡ್ಕ ಎಂಬಲ್ಲಿ ಸಣ್ಣ ಹೊಳೆಗೆ ನಿರ್ಮಿಸಿದ ಮೋರಿ ಮಳೆಗೆ ಕೊಚ್ಚಿ ಹೋದ ಘಟನೆ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಕಳೆದ ವರ್ಷ ಕೆಮ್ಮತ್ತಡ್ಕದಲ್ಲಿ ಮೋರಿ ನಿರ್ಮಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದ ಕಾರಣ ಜು.17ರಂದು ಹೆಚ್ಚಿನ ನೀರು ಹರಿದು ಬಂದ ಕಾರಣ ಮೋರಿ ಕೊಚ್ಚಿ ಹೋಗಿದೆ. ಇದರ ಪರಿಣಾಮ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯಲ್ಲಿ ವಿಸ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಹೋಗುತ್ತಿದ್ದು ಇದೀಗ ರಸ್ತೆ ಸಂಪರ್ಕ ಕಡಿತಗೊಂಡ ಕಾರಣ ಕಷ್ಟಕರವಾಗಿದೆ.
