ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪಠ್ಯಕ್ಕೂ ಒತ್ತು ನೀಡಲು ಸಮಾನ ಮನಸ್ಕರ ವೇದಿಕೆ ಆಗ್ರಹ

0

ಪುತ್ತೂರು: ರಾಜ್ಯಾಧ್ಯಂತ 4 ಸಾವಿರಕ್ಕೂ ಹೆಚ್ಚು ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿರುವುದು ಅಭಿನಂದನೀಯ ಮತ್ತು ಸ್ವಾಗತಾರ್ಹ ಎಂದು ಪುತ್ತೂರು ಸಮಾನ ಮನಸ್ಕರ ವೇದಿಕೆ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

ಆಧುನಿಕತೆಗೆ ತಕ್ಕಂತೆ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಟಿವಿಗಳು ಹಾಗೂ ಕಲಿಕಾ ಪರಿಕರಗಳ ಖರೀದಿಗೆ ಸಿದ್ಧತೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕೂಡಾ ನೀಡಲಾಗುತ್ತಿದೆ, ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡಕ್ಕೆ ಒತ್ತು ಕೊಡುವುದರ ಜೊತೆಗೆ 4ನೇ ಅಥವಾ 5ನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಕಲಿಸುವುದಕ್ಕೆ ಚಾಲನೆ ನೀಡಬೇಕು, ಆಗ ಮಕ್ಕಳು ಪ್ರಾಥಮಿಕ ತರಗತಿಯಿಂದ ಪ್ರೌಢ ತರಗತಿಗೆ ತೇರ್ಗಡೆ ಹೊಂದಿದಾಗ ಇಂಗ್ಲಿಷ್ ಮಾತನಾಡಲು ಪ್ರಾರಂಭಿಸಿ, ಆಂಗ್ಲ ಮಾಧ್ಯಮದ ಮಕ್ಕಳ ಮುಂದೆ ಕನ್ನಡ ಮಾಧ್ಯಮದ ಮಕ್ಕಳು ಕೂಡಾ ಉತ್ತಮವಾಗಿ ಇಂಗ್ಲೀಷ್ ಮಾತನಾಡಲು ಸಾಧ್ಯವಾಗುತ್ತದೆ, ಹಾಗಾಗಿ ಸರಕಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here