ಆ.3: ಶ್ರೀ ಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆ

0

ಉಪ್ಪಿನಂಗಡಿ: ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಶ್ರೀ ಮಾಧವ ಶಿಶು ಮಂದಿರ ಆಯೋಜಿಸುವ ಶ್ರೀ ಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆಯು ಆ.3ರಂದು ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ನಡೆಯಲಿದೆ.


ಬೆಳಗ್ಗೆ 11ರಿಂದ ಪ್ರಾರಂಭವಾಗುವ ಈ ಸ್ಪರ್ಧೆಯು ಅಂಗನವಾಡಿ, ಎಲ್‌ಕೆಜಿ ವಿಭಾಗದಿಂದ ಮೊದಲುಗೊಂಡು ಸಾರ್ವಜನಿಕ ವಿಭಾಗದವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಯಾವುದೇ ಪ್ರಾದೇಶಿಕ ಇತಿಮಿತಿಗಳಿಲ್ಲದೆ ಆಸಕ್ತ ಎಲ್ಲರಿಗೂ ಉಚಿತವಾಗಿ ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ. ಸ್ಪರ್ಧೆಗೆ ಬಳಸುವ ಬಿಳಿ ಹಾಳೆಯನ್ನು ಸಂಘಟಕರೇ ಒದಗಿಸಲಿದ್ದು, ಚಿತ್ರಬಿಡಿಸುವ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಅಂಗನವಾಡಿಯಿಂದ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗೆ ಅವರವರ ಇಷ್ಟದ ಶ್ರೀ ಕೃಷ್ಣನ ಚಿತ್ರವನ್ನು ಬಿಡಿಸಲು ಅವಕಾಶವಿದ್ದು, ಪ್ರೌಢ ಶಾಲಾ ವಿಭಾಗದಿಂದ ಸಾರ್ವಜನಿಕ ವಿಭಾಗದ ಸ್ಪರ್ಧಾಳುಗಳಿಗೆ ಸ್ಥಳದಲ್ಲೇ ವಿಷಯವನ್ನು ತಿಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9741895998 , 9448725998 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here